‘ಶಕ್ತಿ’ ವರದಿ ಉಲ್ಲೇಖ

ಮಡಿಕೇರಿ, ಡಿ. ೭: ಜಿಲ್ಲೆಯಲ್ಲಿ ಹುಲಿ ಮತ್ತು ಕಾಡಾನೆ ದಾಳಿ ಹೆಚ್ಚಾಗುತ್ತಿರುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯ ಸುಜಾ ಕುಶಾಲಪ್ಪ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ತಾ. ೬ ರಂದು ‘ಶಕ್ತಿ’ಯಲ್ಲಿ ಪ್ರಕಟವಾಗಿದ್ದ ಕೊಳತ್ತೋಡು ಗ್ರಾಮದಲ್ಲಿ ಹುಲಿ ಮತ್ತು ಕಾಡಾನೆ ಹಾವಳಿ ದೂರು ನೀಡಿದರೂ ಸ್ಪಂದಿಸದ ಅರಣ್ಯ ಇಲಾಖೆ ಗ್ರಾಮಸ್ಥರ ಅಸಮಾಧಾನ ಎಂಬ ವರದಿಯನ್ನು ಉಲ್ಲೇಖಿಸಿ ಅವರು ವಿಷಯ ಪ್ರಸ್ತಾಪಿಸಿದ್ದರು.

ವನ್ಯಜೀವಿಗಳ ಕಾಟದಿಂದ ಜನರು- ಕಾರ್ಮಿಕರು ಭಯದಿಂದ ಬದುಕುವಂತಾಗಿದೆ. ಇದೀಗ ಭತ್ತದ ಕುಯ್ಲು ಆರಂಭಗೊಳ್ಳುತ್ತಿದ್ದು, ಕಾಡಾನೆಗಳ ಹಿಂಡು ಗದ್ದೆಗಳಿಗೆ ನುಗ್ಗಿ ಫಸಲು ನಾಶಗೊಳಿಸುತ್ತಿವೆ. ಈ ಹಿನ್ನೆಲೆ ತ್ವರಿತ ಕಾರ್ಯಾಚರಣೆಗೆ ಅವರು ಒತ್ತಾಯಿಸಿದರು. ಇದಕ್ಕೆ ಸಭಾ ನಾಯಕ ಬೋಸರಾಜ್ ಅವರು ಪ್ರತಿಕ್ರಿಯಿಸಿ ಸಂಬAಧಿಸಿದವರಿಗೆ ಸೂಚನೆ ನೀಡುವ ಕುರಿತು ಭರವಸೆಯಿತ್ತರು.