ಮಡಿಕೇರಿ, ಡಿ. ೬: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಕೊಡಗರು ಎಂದು ನಮೂದಾಗಿರುವದನ್ನು ಕೊಡವ ಎಂದು ಸೇರಿಸುವ ಕುರಿತು ತಾ.೫ರಂದು ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಕೃತ ಆದೇಶ ಜಾರಿಯಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಹಾಗೂ ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಈ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಇದೀಗ ಈ ಆದೇಶ ತಾ. ೫ರಂದು ಹೊರಡಿಸಲಾಗಿರುವ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ.

ಸರಕಾರದ ಹೊಸ ಆದೇಶದಂತೆ ದಿನಾಂಕ ೩೦-೩-೨೦೦೨ರ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪ್ರವರ್ಗ-೩ಎ ಕ್ರ.ಸಂಖ್ಯೆ ೨ರಲ್ಲಿ ನಮೂದಾಗಿರುವ ಕೊಡಗರು (ಏoಜಚಿgಚಿಡಿu) ಎಂಬದರ ಬದಲಾಗಿ ಕನ್ನಡ ಆವೃತ್ತಿಯಲ್ಲಿ ಕೊಡವ ಎಂದು ಮತ್ತು ಆಂಗ್ಲ ಆವೃತ್ತಿಯಲ್ಲಿ ಏoಜಚಿvಚಿ ಎಂದು ಬದಲಾಯಿಸಿ ಆದೇಶಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಹೇಮಲತ ಎಂ. ಅವರು ರಾಜ್ಯಪಾಲರ ಆದೇಶಾನುಸಾರ ಪ್ರಕಟಣೆ ಹೊರಡಿಸಿದ್ದಾರೆ.

‘ಅoಜಚಿvಚಿ’ ಸೇರಿಸಿಲ್ಲ - ನಾಚಪ್ಪ ಅಸಮಾಧಾನ

ನಿನ್ನೆ ಸರಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಜಾತಿ ಪಟ್ಟಿಯಲ್ಲಿ ಬಳಕೆಯಲ್ಲಿದ್ದ ‘ಕೊಡಗರು / ಏoಜಚಿgಚಿಡಿu' ಬದಲಾಗಿ ‘ಕೊಡವ' ಹಾಗೂ ‘ಏoಜಚಿvಚಿ' ಬಳಕೆಗೆ ಆದೇಶಿಸಲಾಗಿದೆ. ಆದರೆ ಸಿ.ಎಸ್ ದ್ವಾರಕನಾಥ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಇವೆರಡು ಬಳಕೆಗಳೊಂದಿಗೆ ‘ಅoಜಚಿvಚಿ' ಎಂಬ ಬಳಕೆಯನ್ನೂ ಸೇರಿಸುವಂತೆ ಸರಕಾರಕ್ಕೆ ಸಲಹೆ ನೀಡಿತ್ತು. ಇದನ್ನು ಗೆಜೆಟ್ ನೋಟಿಫಿಕೇಶನ್‌ನಲ್ಲಿ ಸೇರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು ನಾಚಪ್ಪ ಅವರು, ಇದನ್ನು ಸರಿಪಡಿಸಲು ಮತ್ತೆ ಕೋರ್ಟ್ ಮೆಟ್ಟಿಲು ಏರುವುದಾಗಿ ‘ಶಕ್ತಿ’ಗೆ ಮಾಹಿತಿ ಇತ್ತರು. ಇದಲ್ಲದೆ, ನಿನ್ನೆ ಹೊರಡಿಸಲಾಗಿರುವ ಗೆಜೆಟ್ ನೋಟಿಫಿಕೇಶನ್‌ನಲ್ಲಿ ‘ಕೊಡವ ನ್ಯಾಷನಲ್ ಕೌನ್ಸಿಲ್' ಎಂದು ಉಲ್ಲೇಖಿಸುವ ಬದಲಾಗಿ ಸಂಘಟನೆಯ ಹೆಸರನ್ನೇ ಬದಲಾಯಿಸಿ ‘ರಾಷ್ಟಿçÃಯ ಕೊಡವ ಪರಿಷತ್ತು' ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.