ಮಡಿಕೇರಿ, ಡಿ. ೭: ನೆಹರೂ ಯುವ ಕೇಂದ್ರದ ವತಿಯಿಂದ ಮೈಸೂರಿನ ಫಿಲೋಮಿನಾ ಸಭಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ವೀರಾಜಪೇಟೆಯ ವಿ.ಎಸ್. ಸಂಚಿತ್ ಕತಾ ವಿಭಾಗದಲ್ಲಿ ಪ್ರಥÀಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾನೆ. ಅಲ್ಲದೆ, ಕುಮಿತೆ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡಿದ್ದಾನೆ. ಸಂತ ಅನ್ನಮ್ಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ವಿ.ಬಿ. ಸುರೇಶ್ ಹಾಗೂ ಎಂ.ಎಸ್. ಪ್ರಮೀಳ ದಂಪತಿಯ ಪುತ್ರನಾಗಿದ್ದು, ಸೆನ್ಸಾಯಿ ಚಂದ್ರ ಅವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ.