ಚೆಟ್ಟಳ್ಳಿ, ಡಿ. ೭: ಆಫ್ ಸೀಸನ್ ಲಿಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಕುರಿತು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು. ಭಾರತೀಯ ತೋಟಗಾರಿಕಾ ಸಂಸ್ಥೆಯ ನಿರ್ದೇಶಕರಾದ ಡಾ. ಬಿಕಾಸ್ದಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಲವು ವರ್ಷಗಳಿಂದ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ವಿವಿಧs ಬಗೆಯ ಲಿಚಿ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದ್ದು, ವಿದೇಶಗಳಲ್ಲಿ ಜೂನ್ ತಿಂಗಳಲ್ಲಿ ಲಿಚಿ ಫಸಲು ನೀಡಿದರೆ, ಕೊಡಗಿನ ವಾತಾವರಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಲಿಚಿ ಫಸಲು ಬರುತ್ತಿದೆ. ಆದರೂ ಲಿಚಿ ಬೆಳೆಯ ಅಭಿವೃದ್ಧಿಯಾಗಿಲ್ಲ. ಮುಂದಿನ ದಿನಗಳಲ್ಲಿ ಲಿಚಿ ಬೆಳೆಯನ್ನು ಕೇಂದ್ರೀಯ ತೋಟಗಾರಿಕಾ ಕೇಂದ್ರದ ವತಿಯಿಂದ ಬೆಳೆಗಾರರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ತೋಟಗಾರಿಕಾ ಕೇಂದ್ರದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾದ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥರಾದ ಡಾ. ರಾಜೇಂದಿರನ್ ವಿದೇಶಿ ತಳಿಯಾದ ಲಿಚಿಯನ್ನು ಹಲವು ವೈಜ್ಞಾನಿಕ ವಿಧಾನಗಳ ಮೂಲಕ ಈ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಬೆಳೆಗಾರÀರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾಫಿ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಪ್ರಗತಿಪರ ಬೆಳೆಗಾರ ಬೋಸ್ ಮಂದಣ್ಣ ಮಾತನಾಡಿ, ಕೊಡಗು ಹಾಗೂ
(ಮೊದಲ ಪುಟದಿಂದ) ವೈನಾಡಿನ ವಾತಾವರಣ ಆಫ್ ಸೀಜನ್ ಲಿಚಿ ಬೆಳೆಗೆ ಸೂಕ್ತವಾದ್ದರಿಂದ ಉತ್ತಮ ಆದಾಯಕ್ಕೆ ಮೂಲವಾಗಿದೆ. ಬೆಳೆಗಾರರಿಗೆ ಉತ್ತಮ ಇಳುವರಿ ನೀಡುವ ಗಿಡಗಳು ದೊರೆಯುತ್ತಿಲ್ಲ. ಮಾರುಕಟ್ಟೆಯ ಕೊರತೆಯೂ ಇದೆ. ಚೆಟ್ಟಳ್ಳಿ ಕೇಂದ್ರದಲ್ಲಿ ಬೆಳೆಗಾರರ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಬೆಳೆಗಾರರಿಗೆ ಪ್ರಯೋಜನಕಾರಿಯಾಗಲಿ ಎಂದು ಹೇಳಿದರು.
ತೋಟಗಾರಿಕಾ ಸಂಶೋಧನಾ ಕೇಂದ್ರದಿAದ ಬೆಳೆಗಾರರಿಗೆ ಉತ್ತಮ ತಳಿಯ ಗಿಡಗಳನ್ನು ವಿತರಿಸುವ ಪ್ರಯತ್ನ ನಡೆೆಯುತ್ತಿದ್ದು, ಬೆಳೆಗಾರರ ಸಹಕಾರ ಮುಖ್ಯವೆಂದು ಐಐಹೆಚ್ಆರ್ನ ಸಂಘಟಕ ಡಾ. ಪ್ರಕಾಶ್ ಪಾಟೀಲ್ ಹಾಗೂ ಐಐಹೆಚ್ಆರ್ನ ನಿರ್ದೇಶಕ ಡಾ. ಸಂಜೀವಕುಮಾರ್ ಸಿಂಗ್ ನುಡಿದರು.
ಕಾರ್ಯಕ್ರಮದ ಅಂಗವಾಗಿ ಡಾ. ಬಿಕಾಸ್ ದಾಸ್, ಡಾ. ಪ್ರಕಾಶ್ ಪಾಟೀಲ್, ಡಾ. ಸಂಜೀವ ಕುಮಾರ್ ಸಿಂಗ್, ಬೋಸ್ ಮಂದಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೀಟಶಾಸ್ತçದ ವಿಜ್ಞಾನಿ ಡಾ. ರಾಣಿ ನಿರೂಪಿಸಿದರು. ಕೇಂದ್ರದ ವಿಜ್ಞಾನಿ ಡಾ. ಮುರಳೀಧÀರ ಬಿ.ಎಂ. ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕೇಂದ್ರದ ಹಾಗೂ ಬೆಳೆಗಾರರು ಬೆಳೆದ ವಿವಿಧ ಲಿಚಿ ಹಣ್ಣುಗಳು, ವಿವಿಧ ನಾಟಿ ಹಣ್ಣುಗಳು ಬಗೆಬಗೆಯ ಕೀಟಗಳು, ಕಸಿಕಟ್ಟಿದ ಗಿಡಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ನಂತರ ನಡೆದ ಕಾರ್ಯಾಗಾರದಲ್ಲಿ ಡಾ. ಬಿಕಾಸ್ ದಾಸ್ ಹಾಗೂ ಡಾ. ಮುರಳೀಧರ್ ಲಿಚಿ ಬೆಳೆಯ ನಿರ್ವಹಣೆ ಹಾಗೂ ಬೇಸಾಯ ತಾಂತ್ರಿಕತೆಯ ಬಗ್ಗೆ ತಿಳಿಸಿದರು. ನಂತರ ಬೆಳೆಗಾರರಿಗೆ ಕೇಂದ್ರದ ಲಿಚಿ ತೋಟದ ವೀಕ್ಷಣಾ ಕಾರ್ಯಕ್ರಮ ನಡೆಯಿತು. ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ, ಕೃಷಿ ಇಲಾಖೆ, ಕಾಫಿ ಮಂಡಳಿ, ಸಂಬಾರ ಮಂಡಳಿ ಹಾಗೂ ವಿವಿಧ ಇಲಾಖೆಗಳ ತಜ್ಞರು ಹಾಗೂ ಅಧಿಕಾರಿಗಳು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು, ಕೊಡಗು, ಹಾಸನ, ಚಿಕ್ಕಮಂಗಳೂರು ಹಾಗೂ ಪಂಜಾಬ್ನ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
- ಪುತ್ತರಿರ ಕರುಣ್ಕಾಳಯ್ಯ