ಮಡಿಕೇರಿ, ಡಿ. ೮: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಸಂಘದಿAದ ಬೆಳಗಾವಿ ಸುವರ್ಣ ಸೌಧದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಕೊಡಗು ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟ ಬೆಂಬಲ ಸೂಚಿಸಿದೆ.

ತಾ. ೧೧ ರಂದು ಪ್ರತಿಭಟನೆ ನಡೆಯಲಿದ್ದು, ಖಾಸಗಿ ಅನುದಾನ ರಹಿತ ಶಾಲೆಗಳಿಗೆ ೧೦ ವರ್ಷಗಳ ನವೀಕರಣವನ್ನು ನಿಗದಿಪಡಿಸುವ ಕುರಿತು, ಖಾಸಗಿ ಶಾಲೆಗಳಿಗೆ ನವೀಕರಣ ಸಂದರ್ಭದಲ್ಲಿ ಕೇಳುವ ಪ್ರಮಾಣ ಪತ್ರಗಳಲ್ಲಿ ವಿನಾಯಿತಿ ನೀಡುವುದು, ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ ಕಡ್ಡಾಯವಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗುವುದು. ಜಿಲ್ಲೆಯಿಂದಲೂ ಪ್ರತಿಭಟನೆಗೆ ತೆರಳಲಾಗುವುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.