ಕಣಿವೆ, ಡಿ. ೭: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದಲ್ಲಿನ ಸರ್ವೆ ಕಣಿವೆ, ಡಿ. ೭: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದಲ್ಲಿನ ಸರ್ವೆ ಸರ್ವೆ ನಡೆಸಿದರು.
ಖಾಸಗಿ ವ್ಯಕ್ತಿಗಳ ಅನುಭೋಗ ದಲ್ಲಿರುವ ಕೆರೆಯ ಜಾಗವನ್ನು ಬಿಡಿಸಬೇಕು. ಅಂತರ್ಜಲ ಸಂರಕ್ಷಣೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೆರೆಯನ್ನು ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಪಂಚಾಯತ್ ಅಧಿಕಾರಿಗಳಿಗೆ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದರು.
ಕುಶಾಲನಗರ ತಾಲೂಕಿನಲ್ಲಿ ೧೨೯ ಕೆರೆಗಳಿದ್ದು, ಈಗಾಗಲೇ ಒತ್ತುವರಿ ಯಾಗಿದ್ದ ಅನೇಕ ಕೆರೆಗಳನ್ನು ಬಿಡಿಸಲಾಗಿದೆ. ಇನ್ನು ೨೦ ಕೆರೆಗಳನ್ನು ಒತ್ತುವರಿದಾರರಿಂದ ಬಿಡಿಸಲಾಗುವುದು ಎಂದು ಕಂದಾಯ ಅಧಿಕಾರಿ ಸಂತೋಷ್ ಸ್ಥಳಕ್ಕೆ ತೆರಳಿದ್ದ ‘ಶಕ್ತಿ'ಗೆ ತಿಳಿಸಿದರು. ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಉಪಾಧ್ಯಕ್ಷ ಎಂ.ಟಿ. ಬೇಬಿ, ಸರ್ವೆ ಅಧಿಕಾರಿ ವೆಂಕಟೇಶ್, ಗ್ರಾಮ ಲೆಕ್ಕಿಗ ಪೀರ್ ಮೊಹಮ್ಮದ್, ತೊರೆನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನಾದೇವಿ ಇದ್ದರು.
-ಕೆ.ಎಸ್. ಮೂರ್ತಿ