ಮಡಿಕೇರಿ, ಡಿ. ೭: ಕಣ್ಣಂಗಾಲ ೧ ಮತ್ತು ೨ ರ ವಾರ್ಡ್ಸಭೆ ತಾ. ೧೧ ರ ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕಣ್ಣಂಗಾಲ ೧ ವಾರ್ಡ್ನ ಅಧ್ಯಕ್ಷತೆ ಗ್ರೀಷ್ಮ ರಂಜು ಅವರ ಮತ್ತು ಕಣ್ಣಂಗಾಲ ೨ ರ ಉಪಾಧ್ಯಕ್ಷೆ ರಜನಿ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹಚ್ಚಿನಾಡು ಮತ್ತು ಎಡೂರು ವಾರ್ಡ್ಗಳ ವಾರ್ಡ್ಸಭೆ ಹಚ್ಚಿನಾಡು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಚ್ಚಿನಾಡು ವಾರ್ಡ್ನ ಸದಸ್ಯ ಎಸ್.ಡಿ. ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಡೂರು ವಾರ್ಡ್ನ ಸದಸ್ಯ ವೈ.ಬಿ. ಲೋಕೇಶ ಅವರ ಅಧ್ಯಕ್ಷತೆಯಲ್ಲಿ ಅಪರಾಹ್ನ ೨ ಗಂಟೆಗೆ ನಡೆಸಲಾಗುವುದು.

ತಾ. ೨೧ ರ ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಅಧ್ಯಕ್ಷೆ ಗ್ರೀಷ್ಮಾ ರಂಜು ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅವರ ಸಮ್ಮುಖದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಒಂಟಿಯAಗಡಿ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಲಿದೆ.