ಮಡಿಕೇರಿ, ಡಿ. ೬: ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಕ್ರೀಡಾ ದಿನಾಚರಣೆಯ ಉದ್ಘಾಟನಾ ಸಮಾರಂಭವು ಗಾಂಧಿ ಮೈದಾನದಲ್ಲಿ ನೆರವೇರಿತು. ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾತನಾಡಿ, ಎಲ್ಲರನ್ನೂ ಪ್ರೀತಿಯಿಂದ ಕಾಣ ಬೇಕೆಂದರು. ಕ್ರೀಡಾ ಚಟುವಟಿಕೆಯ ಸಂದರ್ಭದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಜಾರ್ಜ್ ಬರ್ನಾಡ್ ಮೊರಾನ್ ಮಾತನಾಡಿ, ಸೈಂಟ್ ಮೈಕಲ್ ದೇವದೂತರ ಕುರಿತಾಗಿ ವಿವರಣೆಯಿತ್ತರು.
ವೇದಿಕೆಯಲ್ಲಿ ಮೈಸೂರು ಧರ್ಮ ಕ್ಷೇತ್ರದ ಆಡಳಿತಾಧಿಕಾರಿ ಜಾರ್ಜ್ ಬರ್ನಾಡ್ ಮೊರಾನ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಬಿ.ಸಿ, ನಗರಸಭೆ ಕಮಿಷನರ್ ವಿಜಯ್, ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೇ.ಫಾ. ನವೀನ್ ಕುಮಾರ್, ಪ್ರಾಂಶುಪಾಲ ಸುಮಂತ್ ಕೆ.ಎನ್, ಮುಖ್ಯೋಪಾಧ್ಯಾಯ ಜಾನ್ಸನ್ ಕೆ.ವಿ, ಸಿಸ್ಟರ್ ಪ್ರತಿಮಾ, ಸಿಸ್ಟರ್ ಸರಿತಾ ಉಪಸ್ಥಿತರಿದ್ದರು.
ರೇ.ಫಾ. ನವೀನ್ಕುಮಾರ್ ಸ್ವಾಗತಿಸಿದರೆ, ಲ್ಯಾನ್ಸಿ ಫೆರ್ನಾಂಡಿಸ್, ಸೇವರಿನ್ ಗಾನವಿ ಕಾರ್ಯಕ್ರಮ ನಿರೂಪಿಸಿದರು. ಶಬಮ್ ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಕಾರ್ ಜನರಲ್ ರೇ.ಫಾ. ಆಲ್ಫೆçಡ್ ಜಾನ್ ಮೆಂಡೊನ್ಜಾ ಅವರು ವಹಿಸಿದ್ದರು. ನಂತರ ಮಾತನಾಡಿದ ಅವರು ಕ್ರೀಡೆಯಿಂದಾಗಿ ಮಾತನಾಡಿದ ಅವರು ಕ್ರೀಡೆಯಿಂದಾಗಿ ನಾಯಕತ್ವ ಗುಣಗಳು ಬೆಳೆಯುತ್ತವೆ, ಆರೋಗ್ಯ ಉತ್ತಮವಾಗುತ್ತದೆ ಎಂದರು. ವೇದಿಕೆಯಲ್ಲಿ ರೇ.ಫಾ. ಆಲ್ಫೆçಡ್ ಜಾನ್ ಮೆಂಡೊನ್ಜಾ, ರೇ.ಫಾ. ಮದಲೈ ಮುತ್ತು, ರೇ.ಫಾ. ಸೆಲ್ವಕುಮಾರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾAತ್ ಎಂ, ಪ್ರಾಂಶುಪಾಲರಾದ ಸುಮಯ್ ಕೆ.ಎನ್, ಮುಖ್ಯೋಪಾಧ್ಯಾಯ ಜಾನ್ಸನ್ ಕೆ.ವಿ, ಸಿಸ್ಟರ್ ಸರಿತಾ, ಸಿಸ್ಟರ್ ಪ್ರತಿಮಾ ಅವರು ಉಪಸ್ಥಿತರಿದ್ದರು. ಉಪನ್ಯಾಸಕಿ ಸರಿತಾ ಅವರು ಸ್ವಾಗತಿಸಿದರು. ಲ್ಯಾನ್ಸಿ ಫೆರ್ನಂಡಿಸ್ ವರದಿ ವಾಚಿಸಿದರು, ಉಪನ್ಯಾಸಕಿ ವಿಲ್ಮ ಡಿಸೋಜ ಮತ್ತು ಪಂಕಜ ಕಾರ್ಯಕ್ರಮ ನಿರ್ವಹಿಸಿದರೆ, ಶಿಕ್ಷಕ ಕೇಶವ ವಂದಿಸಿದರು.