ಮಡಿಕೇರಿ, ಡಿ. ೬: ಮಡಿಕೇರಿ ಲಯನ್ಸ್ ಸಂಸ್ಥೆಗೆ ಪ್ರಾಂತೀಯ ಅಧ್ಯಕ್ಷ ಲಯನ್ ಅಂಬೆಕಲ್ ನವೀನ್ ಕುಶಾಲಪ್ಪ ಅವರು ಅಧಿಕೃತ ಭೇಟಿಯನ್ನು ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾದಂತಹ ಸೇವಾ ಕಾರ್ಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಸಮಾಜಮುಖಿ ಕೆಲಸಗಳನ್ನು ಮಾಡಬೇಕಾಗಿ ಕೇಳಿಕೊಂಡರು. ಉತ್ತಮ ಗುಣಮಟ್ಟದ ಸದಸ್ಯರನ್ನು ಆಯ್ಕೆ ಮಾಡಿ ಸಂಸ್ಥೆಗೆ ಸೇರಿಸುವುದರ ಮೂಲಕ ಲಯನ್ಸ್ ಇಂಟರ್ನ್ಯಾಷನಲ್ ಮಿಷನ್ ೧.೫ ಮಿಲಿಯನ್ ಸದಸ್ಯತ್ವ ಗುರಿಯನ್ನು ಸಾಕಾರಗೊಳಿಸಲು ಸಹಕರಿಸಬೇಕಾಗಿ ಕೇಳಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಧುಕ್ ಶೇಟ್ ಅವರು ವಹಿಸಿದ್ದರು. ವೇದಿಕೆಯಲ್ಲಿ ವಲಯ ಅಧ್ಯಕ್ಷರುಗಳಾದಂತ ಸಿ.ಕೆ. ರೋಹಿತ್, ಬಾಲಕೃಷ್ಣ, ಸತೀಶ್, ವಲಯ ಉಸ್ತುವಾರಿ ಕವಿತಾ, ಪ್ರಾಂತೀಯ ರಾಯಭಾರಿ ಧನು ಉತ್ತಯ್ಯ, ಸಂಸ್ಥೆಯ ಕಾರ್ಯದರ್ಶಿ ನಟರಾಜ್ ಅವರು ಉಪಸ್ಥಿತರಿದ್ದರು.