ಮಡಿಕೇರಿ, ಡಿ. ೬: ಬಹುಜನ ಸಮಾಜ ಪಕ್ಷದ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಪಕ್ಷದ ಜಿಲ್ಲಾ ಸಂಯೋಜಕ ಜಯಪ್ಪ ಹಾನಗಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ; ಅಂಬೇಡ್ಕರ್ ಕೆಳಮಟ್ಟದಲ್ಲಿ ಹುಟ್ಟಿ ನೋವು, ಅವಮಾನಗಳನ್ನು ಸಹಿಸಿಕೊಂಡು ವಿಶ್ವಜ್ಞಾನಿ ಎಂಬ ಹೆಸರು ಗಳಿಸಿದವರು. ಯಾವದೇ ಅಧಿಕಾರ, ಪದವಿಗಳಿಗೆ ಆಸೆಪಡದೆ ಬಹುಜನರ ಒಳಿತಿಗಾಗಿ ಬೇರೆ ಬೇರೆ ಪಕ್ಷಗಳನ್ನು ಕಟ್ಟಿದವರು. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕೆಂಬ ಉದ್ದೇಶÀದೊಂದಿಗೆ ಸಂವಿಧಾನ ರಚನೆ ಮಾಡಿದ ಮಹನೀಯರು ಎಂದು ಹೇಳಿದರು.

ಮತ್ತೋರ್ವ ಜಿಲ್ಲಾ ಸಂಯೋ ಜಕ ಕಳ್ಳೀರ ಹರೀಶ್ ಮಾತನಾಡಿ; ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈಗ ಹೆಜ್ಜೆ ಇಡುತ್ತಿದ್ದೇವೆ. ಯಾವದೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆ ಯಡಿ ಚರ್ಚಿಸಿ ಪರಿಹರಿಸಿಕೊಳ್ಳುತ್ತಾ ಪಕ್ಷ ಕಟ್ಟುವ ಕೆಲಸ ಮಾಡೋಣ. ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಂತೆ ಎಲ್ಲರಿಗೂ ಸಮಾನ ಹಕ್ಕು ದೊರಕಿಸಿಕೊಡುವಲ್ಲಿ ಪ್ರಯತ್ನಿಸೋಣವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪಕ್ಷದ ಮಹಿಳಾ ಸಂಚಾಲಕಿ ರೋಹಿಣಿ, ಪದಾಧಿಕಾರಿಗಳಾದ ಗಿರೀಶ್, ಹರೀಶ್, ಪ್ರದೀಶ್ ಇನ್ನಿತರರು ಪಾಲ್ಗೊಂಡಿದ್ದರು.