ಸೋಮವಾರಪೇಟೆ, ಡಿ. ೭: ಇತರ ಜಿಲ್ಲೆಯ ರೈತರಿಗೆ ಇರುವಂತೆ ಕೊಡಗಿನಲ್ಲಿಯೂ ರೈತರ ೧೦ ಹೆಚ್.ಪಿ. ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ತಾ. ೧೧ರಂದು ಸೋಮವಾರಪೇಟೆ ಜೇಸೀ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಘಟಕದ ಸಂಚಾಲಕ ಹೂವಯ್ಯ ಮಾಸ್ಟರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ. ವಿದ್ಯುತ್ ಗಾಗಿ ಕಳೆದ ಅಧಿವೇಶನ ಸಂದರ್ಭ ೨೧ ದಿನ ಹೋರಾಟ ನಡೆಸಿದರೂ ಪರಿಹಾರ ಕಂಡಿಲ್ಲ. ಈಗಲೂ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಹಣ ಕಟ್ಟುವಂತೆ ಒತ್ತಾಯಿಸುತ್ತಿದ್ದು, ಸಂಪರ್ಕ ಕಡಿತಗೊಳಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಉಚಿತ ವಿದ್ಯುತ್‌ಗೆ ಒತ್ತಾಯಿಸಿ ಈಗಾಗಲೇ ಶಾಸಕರು, ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ರಾಜ್ಯಾದ್ಯಂತ ಇರುವಂತೆ ಕೊಡಗಿನ ಕಾಫಿ ಬೆಳೆಗಾರರಿಗೂ ಸೌಲಭ್ಯ ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಆಗಿಲ್ಲ. ಮಲೆನಾಡಿನ ಶಾಸಕರುಗಳು ಈ ಬಗ್ಗೆ ಇಚ್ಚಾಶಕ್ತಿ ತೋರಬೇಕು. ಬೆಳಗಾರರ ಹೊರೆ ತಗ್ಗಿಸಬೇಕು. ರಾಜ್ಯದ ಇತರ ರೈತರಂತೆ ಕೊಡಗಿನವರನ್ನೂ ಪರಿಗಣಿಸಬೇಕು. ವಿದ್ಯುತ್ ಇಲಾಖೆಯ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ತಾ. ೧೧ರಂದು ಬೆಳಗ್ಗಿನಿಂದ ಸಂಜೆಯವರೆಗೆ ಧರಣಿ ಮಾಡಲಾಗುವುದು. ಸ್ಪಂದನ ದೊರಕದಿದ್ದರೆ ಅನಿರ್ಧಿಷ್ಟಾವಧಿಗೆ ಮುಂದುವರೆಸುತ್ತೇವೆ. ಈಗಾಗಲೇ ರೈತರು ಬವಣೆಯಿಂದ ಬಳಲಿದ್ದಾರೆ. ಹೋರಾಟಗಳು ವ್ಯರ್ಥವಾಗುತ್ತಿವೆ ಎಂದು ವಿಷಾಧಿಸಿದರು.

ಇದರೊಂದಿಗೆ ರೈತರ ಜಮೀನುಗಳ ದುರಸ್ತಿ, ಪೋಡಿ ಆಗುತ್ತಿಲ್ಲ. ಕಂದಾಯ ಮತ್ತು ಸರ್ವೆ ಇಲಾಖೆಯಿಂದ ತೊಂದರೆ ಮಿತಿಮೀರಿದೆ. ಮಧ್ಯವರ್ತಿಗಳ ಮೂಲಕ ಹೋದರೆ ಒಂದೇ ತಿಂಗಳಲ್ಲಿ ಕೆಲಸ ಆಗುತ್ತದೆ. ಆದರೆ ರೈತರು ನೇರವಾಗಿ ತೆರಳಿದರೆ ಕೆಲಸಕಾರ್ಯಗಳು ಆಗುತ್ತಿಲ್ಲ. ನೂತನ ಶಾಸಕರು ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಬೇಕು, ಇಲ್ಲವಾದರೆ ಸಮಸ್ಯೆ ಮತ್ತಷ್ಟು ಬಿಡಗಾಯಿಸುತ್ತದೆ ಎಂದರು.

ಕAದಾಯ ಸಚಿವರ ಕೃಷ್ಣ ಭೈರೇಗೌಡ ಅವರು, ೧೩೦ ತಾಲೂಕುಗಳನ್ನು ಪೋಡಿಮುಕ್ತ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ಕೊಡಗಿನ ೫ ತಾಲೂಕುಗಳನ್ನೂ ಸೇರಿಸಬೇಕು. ಇದಕ್ಕೆ ಶಾಸಕರುಗಳು ಸಚಿವರ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದ ಗೋಷ್ಠಿಯಲ್ಲಿದ್ದ ರೈತ ಸಂಘದ ಅಧ್ಯಕ್ಷ ದಿನೇಶ್ ಅವರು, ಜಿಲ್ಲೆಯಲ್ಲಿ ೫ ತಾಲೂಕುಗಳು ಬರಪೀಡಿತವಾಗಿದೆ. ಈಗಿನ ಪರಿಹಾರ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜೆಗೆ’ಯಂತಾಗಿದೆ. ವೈಜ್ಞಾನಿಕವಾಗಿ ಲೆಕ್ಕಹಾಕಿ ದುಪ್ಪಟ್ಟು ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕು ಎಂದರು.

ಜನಸ್ಪAದನಾ ಕಾರ್ಯಕ್ರಮದ ಮೂಲಕ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಬಗ್ಗೆ ಮೊಬೈಲ್‌ಗಳಿಗೆ ಸಂದೇಶ ಬರುತ್ತಿದೆಯೆ ಹೊರತು ಯಾವುದೆ ಕೆಲಸ ಆಗಿಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸಲು ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಅರ್ಜಿದಾರರು ತೊಂದರೆಗೆ ಒಳಗಾಗಿದ್ದಾರೆ ಎಂದ ಅವರು, ವಿವಿಧ ಇಲಾಖಾಧಿಕಾರಿ ಗಳನ್ನು ಒಳಗೊಂಡAತೆ ರೈತ ಸಂಪರ್ಕ ಸಭೆ ಕರೆಯುವಂತೆ ಕಳೆದ ಒಂದು ತಿಂಗಳ ಹಿಂದೆಯೇ ತಹಶೀಲ್ದಾರ್‌ಗೆ ಮನವಿ ಮಾಡಿದ್ದೆವು. ಆದರೆ ಈವರೆಗೆ ಸಭೆ ಕರೆದಿಲ್ಲ. ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ತಾಲೂಕು ಕಚೇರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಇದರೊಂದಿಗೆ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಕಲ್ಪಿಸಬೇಕು. ಫಸಲು ಬಂದಿರುವ ಸಂದರ್ಭದಲ್ಲಿ ಕಾಡಾನೆ ಸೇರಿದಂತೆ, ಕಾಟಿ, ಕಾಡುಹಂದಿಗಳು ಹಾಳು ಮಾಡುತ್ತಿವೆ. ಫಸಲು ಕೈ ಸೇರುತ್ತಿಲ್ಲ. ಇದರಿಂದಾಗಿ ಗದ್ದೆ ಮಾಡುವುದನ್ನೇ ಬಿಡುವಂತಾಗಿದೆ. ರೈತರ ಬದುಕು ದುಸ್ತರವಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿ ಗಳಾದ ಮಚ್ಚಂಡ ಅಶೋಕ್, ಹೆಚ್.ಇ. ರಮೇಶ್, ಯಡೂರು ಕುಶಾಲಪ್ಪ, ಗರಗಂದೂರು ಲಕ್ಷ್ಮಣ್ ಉಪಸ್ಥಿತರಿದ್ದರು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕೆAದು ಕಿವಿಮಾತು ನುಡಿದರು.

ಈ ಸಂದರ್ಭ ರಾಮನಗರ ಗೆಜ್ಜೆಗಾರುಗುತ್ತೆ ಮಠಾಧೀಶರಾದ ಶ್ರೀ ಕುಮಾರಸ್ವಾಮೀಜಿ, ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದ್, ತಾಲೂಕು ಅಧ್ಯಕ್ಷ ಬಿ.ವಿ. ರವಿ, ಉಪಾಧ್ಯಕ್ಷ ಮಣಿ, ಖಜಾಂಚಿ ಕೆ.ಎನ್. ದೀಪಕ್, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಸಹ ಕಾರ್ಯದರ್ಶಿ ಲಿಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಕಟ್ಟಡ ಮಾಲೀಕ ದಿಲ್ಗಿನ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.