ಕೂಡಿಗೆ, ಡಿ. ೭ : ಹಾರಂಗಿ ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಲೆಯ ನೀರನ್ನು ಬಳಕೆ ಮಾಡಿ ಭತ್ತದ ನಾಟಿ ಮಾಡಿದ್ದ ಹೈಬ್ರೀಡ್ ತಳಿಯ ಭತ್ತದ ಬೆಳೆ ಕಟಾವಿಗೆ ಬಂದ ಹಿನ್ನೆಲೆಯಲ್ಲಿ ಹಾಗೂ ಕಳೆದ ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದಾಗಿ ಈಗಾಗಲೇ ಕಟಾವು ಮಾಡಿದ ಬೆಳೆಯನ್ನು ರಕ್ಷಿಸಿಕೊಳ್ಳಲು ಅಚ್ಚುಕಟ್ಟು ಪ್ರದೇಶ ನೂರಾರು ರೈತರು ಯಂತ್ರಗಳ ಬಳಕೆಗೆ ಮುಂದಾಗಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದ ಭತ್ತದ ಬೆಳೆಯನ್ನು ಕಟಾವು ಮಾಡಿ ಗದ್ದೆಗಳಲ್ಲಿ ಒಣಗಿಸಿ ನಂತರ ಜಮೀನಿನ ಕಣದಲ್ಲಿ ಭತ್ತ ಹಾಗೂ ಅದರ ಹುಲ್ಲನ್ನು ಸಿದ್ಧಪಡಿಸುವುದು ಸಾಮಾನ್ಯ. ಆದರೆ ಕಳೆದ ಒಂದು ವಾರದಿಂದಲೂ ಭತ್ತ ಬೆಳೆ ಒಣಗಲು ಸರಿಯಾದ ಬಿಸಿಲು ಇಲ್ಲದೆ ಮೋಡ ಕವಿದ ವಾತಾವರಣದೊಂದಿಗೆ ಮಳೆ ಬರುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಾರ್ಮಿಕರ ಕೊರತೆಯಿಂದ ಭತ್ತ ಹುಲ್ಲು ಸಮರ್ಪಕವಾಗಿ ಸಿಗದಿದ್ದರೂ ಕೂಡ ಭತ್ತದ ಕಾಳುಗಳನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ ರೈತರು ಯಂತ್ರಗಳ ಬಳಕೆಗೆ ಮುಂದಾಗಿ ಬೆಳೆಯ ರಕ್ಷಣೆ ಮಾಡಿಕೊಳ್ಳುತ್ತಿರುವ ದೃಶ್ಯ ವಿವಿಧ ಗ್ರಾಮಗಳಲ್ಲಿ ಕಂಡುಬರುತ್ತಿದೆ. -ಕೆ.ಕೆ. ನಾಗರಾಜಶೆಟ್ಟಿ