ಸೋಮವಾರಪೇಟೆ, ಡಿ. ೭: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಮತ್ತು ಓನರ್ಸ್ ಅಸೋಸಿಯೇಷನ್‌ನ ಸೋಮವಾರಪೇಟೆ ತಾಲೂಕು ಘಟಕದ ನೂತನ ಕಚೇರಿಯನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣ ಕಣಾರ ಕಟ್ಟಡದಲ್ಲಿ ನೂತನವಾಗಿ ತೆರೆಯಲಾಗಿರುವ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರು ಸುರಕ್ಷತೆಯ ಚಾಲನೆಗೆ ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭ ರಾಮನಗರ ಗೆಜ್ಜೆಗಾರುಗುತ್ತೆ ಮಠಾಧೀಶರಾದ ಶ್ರೀ ಕುಮಾರಸ್ವಾಮೀಜಿ, ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದ್, ತಾಲೂಕು ಅಧ್ಯಕ್ಷ ಬಿ.ವಿ. ರವಿ, ಉಪಾಧ್ಯಕ್ಷ ಮಣಿ, ಖಜಾಂಚಿ ಕೆ.ಎನ್. ದೀಪಕ್, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಸಹ ಕಾರ್ಯದರ್ಶಿ ಲಿಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಕಟ್ಟಡ ಮಾಲೀಕ ದಿಲ್ಗಿನ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.