ನಾಪೋಕ್ಲು, ಡಿ. ೭: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕಿನ ಚೆಟ್ಟಿಮಾನಿಯಲ್ಲಿ ಗ್ರಾಮ ಸಿರಿ ಕಾರ್ಯಕ್ರಮ ನಡೆಸುವ ಸಲು ವಾಗಿ ಚೆಟ್ಟಿಮಾನಿ ಶಾದಿ ಮಹಲ್‌ನಲ್ಲಿ ಪಂಚಾಯಿತಿ ಅಧ್ಯಕ್ಷ ಪೊಡನೋಳನ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪೂರ್ಣ ವಿವರ ನೀಡಿದರು. ಜನವರಿ ೨೦ ರ ಶನಿವಾರ ಹಾಗೂ ೨೧ ರ ಭಾನುವಾರ ಗ್ರಾಮ ಸಿರಿ ಕಾರ್ಯಕ್ರಮವನ್ನು ನಡೆಸುವಂತೆ ಸಭೆ ತೀರ್ಮಾನಿಸಿತು. ಜ. ೨೦ ರಂದು ಗ್ರಾಮೀಣ ಕ್ರೀಡಾಕೂಟಗಳು ಹಾಗೂ ಜ. ೨೧ ರಂದು ಬೆಳಗ್ಗಿನಿಂದ ಸಂಜೆವರೆಗೆ ಗ್ರಾಮ ಸಿರಿ ಕಾರ್ಯ ಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸಭೆ ನಿರ್ಧರಿಸಿತು. ಧ್ವಜಾರೋಹಣ, ಗ್ರಾಮೀಣ ಜನಪದ ಕಲಾತಂಡಗಳ ಹಾಗೂ ಸ್ತಬ್ಧಚಿತ್ರಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಆರಂಭವಾಗಿ ಸಭಾ ಕಾರ್ಯಕ್ರಮ, ಸಾಧಕರ ಸನ್ಮಾನ, ಉಪನ್ಯಾಸ, ಗೀತ