ನಾಪೋಕ್ಲು, ಡಿ. ೭: ಪಾರಾಣೆ- ಬಲಮುರಿ ಸಂಪರ್ಕ ರಸ್ತೆಯ ಬಲಮುರಿ ಗ್ರಾಮದ ಸೇತುವೆ ಕೆಳಗೆ ಇರುವ ರಸ್ತೆಯ ಬಳಿ ಗಾಂಜಾ ಸೇವಿಸುತ್ತಿದ್ದ ಆರೋಪದಡಿ ಇಬ್ಬರನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಬಲಮುರಿ ಗ್ರಾಮದ ಆಟೋ ಚಾಲಕ ತೌಫಿಕ್ ಹಾಗೂ ಕಾಂತೂರು ಗ್ರಾಮದ ವ್ಯಾಪಾರಿ ತಿಮ್ಮಯ್ಯ ಬಂಧಿತ ಆರೋಪಿಗಳು.

ಸಮೀಪದ ಬಲಮುರಿ ಗ್ರಾಮದ ಸೇತುವೆ ಬಳಿ ಡಿಸೆಂಬರ್ ೪ ರಂದು ಗಾಂಜಾ ಸೇವನೆ ಮಾಡಿರುವಂತೆ ಕಂಡುಬAದ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆರೋಪಿಗಳು ಗಾಂಜಾ ಸೇವನೆ ಮಾಡಿದ್ದುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.