(ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಡಿ. ೬: ಕೊಡಗಿನ ಲಿಚಿ ಹಣ್ಣಿಗೆ, ಕೇರಳ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರತೀ ಕೆ.ಜಿ.ಗೆ ೨೫೦ ರಿಂದ ೩೦೦ ರೂ.ವರೆಗೆ ಮಾರಾಟವಾಗುತ್ತಿವೆ.

ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ ಕಳೆದ ೨೦ ವರ್ಷಗಳಿಂದ ಲಿಚಿ ಹಣ್ಣು ಬೆಳೆಯಲಾಗುತ್ತಿದೆ.

೫೦ಕ್ಕೂ ಹೆಚ್ಚು ಮರಗಳಲ್ಲಿ ಲಿಚಿ ಹಣ್ಣು ಬೆಳೆದಿದ್ದು ಉತ್ತಮ ಫಸಲು ಕೂಡ ದೊರೆಯುತ್ತದೆ.

ಲಿಚಿ ಹಣ್ಣಿನ ಮೂಲ ದಕ್ಷಿಣ ಚೀನಾದ ಓಮನ್ ಪ್ರಾಂತ್ಯವಾಗಿದೆ. ಮ್ಯಾನ್ಮಾರ್, ಆಸ್ಟೆçÃಲಿಯಾ, ದಕ್ಷಿಣ ಆಫ್ರಿಕಾ, ಥ್ಲಾಯೆಂಡ್ ಹಾಗೂ ಹಾಂಕಾAಗ್ ದೇಶಗಳಲ್ಲಿ ಲಿಚಿ ಹಣ್ಣನ್ನು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬೆಳೆಯಲಾಗುತ್ತಿದೆ.

ಭಾರತದಲ್ಲಿ ಶೇಕಡಾ ೫೦ ಕ್ಕೂ ಹೆಚ್ಚು ಭಾಗದಲ್ಲಿ, ಲಿಚಿ ಬೆಳೆಯುತ್ತಿರುವುದು ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ಹಾಗೂ ಒಡಿಶಾದಲ್ಲಿ ಲಿಚಿ ಹಣ್ಣು ಬೆಳೆಯಲಾಗುತ್ತಿದೆ.

ವಿಶೇಷವೇನೆಂದರೆ ಉತ್ತರ ಭಾರತ ರಾಜ್ಯದಲ್ಲಿ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.

ಆ ಸಮಯದಲ್ಲಿ ಲಿಚಿಗೆ ಬೇಡಿಕೆ ಕಡಿಮೆಯಿರುವುದರಿಂದ ಕೆಜಿಗೆ ಬರೀ ೬೦ ರೂ.ಗೆ ಮಾರಾಟವಾಗುತ್ತದೆ.

ಆದರೆ ಕೊಡಗು ಜಿಲ್ಲೆಯಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ದೇಶದ ಯಾವ ಭಾಗದಲ್ಲಿ ಕೂಡ ಲಿಚಿ ಫಸಲು ಇರುವುದಿಲ್ಲ. ಆದ್ದರಿಂದ ಕೊಡಗಿನ ಲಿಚಿ ಬೆಳೆಯವವರು ಭಾರತದಲ್ಲಿ ಶೇಕಡಾ ೫೦ ಕ್ಕೂ ಹೆಚ್ಚು ಭಾಗದಲ್ಲಿ, ಲಿಚಿ ಬೆಳೆಯುತ್ತಿರುವುದು ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ಹಾಗೂ ಒಡಿಶಾದಲ್ಲಿ ಲಿಚಿ ಹಣ್ಣು ಬೆಳೆಯಲಾಗುತ್ತಿದೆ.

ವಿಶೇಷವೇನೆಂದರೆ ಉತ್ತರ ಭಾರತ ರಾಜ್ಯದಲ್ಲಿ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.

ಆ ಸಮಯದಲ್ಲಿ ಲಿಚಿಗೆ ಬೇಡಿಕೆ ಕಡಿಮೆಯಿರುವುದರಿಂದ ಕೆಜಿಗೆ ಬರೀ ೬೦ ರೂ.ಗೆ ಮಾರಾಟವಾಗುತ್ತದೆ.

ಆದರೆ ಕೊಡಗು ಜಿಲ್ಲೆಯಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ದೇಶದ ಯಾವ ಭಾಗದಲ್ಲಿ ಕೂಡ ಲಿಚಿ ಫಸಲು ಇರುವುದಿಲ್ಲ. ಆದ್ದರಿಂದ ಕೊಡಗಿನ ಲಿಚಿ ಬೆಳೆಯವವರು

(ಮೊದಲ ಪುಟದಿಂದ) ಹಾಕಿ ಹಣ್ಣನ್ನು ಬಾವಲಿಯಿಂದ ಸಂರಕ್ಷಿಸುತ್ತಿದ್ದಾರೆ. ಅಲ್ಲದೇ ರಾತ್ರಿ ಕಳ್ಳರ ಹಾವಳಿ ಇರುವುದರಿಂದ ಮರದ ಪಕ್ಕದಲ್ಲೇ ಟೆಂಟ್ ಹಾಕಿ ಕಾವಲು ಕಾಯುತ್ತಿದ್ದಾರೆ.ಆಸಕ್ತಿ ತೋರದ ಬೆಳೆಗಾರರು

ಲಾಭದಾಯಕ ಬೆಳೆಯಾಗಿದೆ. ಮರವನ್ನು ನೆಟ್ಟು ಸಂರಕ್ಷಿಸಿದರೆ, ೪ ರಿಂದ ೫ ವರ್ಷದೊಳಗೆ ಹಣ್ಣು ಫಸಲು ನೀಡುತ್ತದೆ.

ಮೊದಲಿಗೆ ಒಂದು ಮರದಲ್ಲಿ ೨೦ ರಿಂದ ೪೦ ಕೆಜಿ ಹಾಗೂ ಏಳೆಂಟು ವರ್ಷದಲ್ಲಿ ಕೇವಲ ಒಂದೇ ಮರದಲ್ಲಿ ೧೦೦ ಕೆಜಿಗೂ ಅಧಿಕ ಹಣ್ಣು ಬೆಳೆಯಬಹುದು. ಆದರೆ ಜಿಲ್ಲೆಯ ಬೆಳೆಗಾರರಿಗೆ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಹಾಗೂ ಯಾರೂ ಕೂಡ ಇದುವರೆಗೆ ಬೆಳೆಯತ್ತ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಕಾಫಿ, ಕರಿಮೆಣಸಿನ ಬೆಲೆ ಕುಸಿತ ನಿರ್ವಹಣೆ ಸಮಸ್ಯೆಯಿಂದ ತೊಂದರೆಗೀಡಾಗಿರುವ ಜಿಲ್ಲೆಯ ಬೆಳೆಗಾರರು ಲಾಭದಾಯಕ ಬೆಳೆಯಾದ ಬೆಳೆಯತ್ತ ಮುಖಮಾಡಿದರೆ, ಖಂಡಿತ ಲಾಭಗಳಿಸಬಹುದಾಗಿದೆ ಎನ್ನಲಾಗಿದೆ.