ಸೋಮವಾರಪೇಟೆ, ಡಿ. ೬: ಮಂಗಳೂರಿನ ಕುದ್ರೋಳಿ ಕೊರಗಪ್ಪ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಸೋಮವಾರಪೇಟೆಯ ಈರ್ವರು ವಿದ್ಯಾರ್ಥಿಗಳು ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಪಟ್ಟಣದ ಕ್ರಿಯೇಟಿವ್ ಅಕಾಡೆಮಿಯ ವಿದ್ಯಾರ್ಥಿ ಕೆ.ಆರ್. ಅನರ್ಘ್ಯ ಪೂವಯ್ಯ ಚಿನ್ನದ ಪದಕ ಹಾಗೂ ಅತ್ತೂರು ಜ್ಞಾನಗಂಗಾ ಶಾಲೆಯ ವಿದ್ಯಾರ್ಥಿ ಕೆ.ಆರ್. ಆರಾಧ್ಯ ಪೂವಯ್ಯ ಬೆಳ್ಳಿ ಪದಕ ಪಡೆದಿದ್ದಾರೆ.
ಈರ್ವರು ವಿದ್ಯಾರ್ಥಿಗಳು ಕಿರಗಂದೂರು ಗ್ರಾಮದ ಕೆ.ಪಿ. ರೋಷನ್ ಮತ್ತು ಚೈತ್ರ ದಂಪತಿ ಪುತ್ರಿಯರಾಗಿದ್ದು, ಶೊಟೋಕಾನ್ ಕರಾಟೆ ಸಂಸ್ಥೆಯ ಎನ್.ಸಿ. ಸುದರ್ಶನ್ ಅವರ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.