ಮಡಿಕೇರಿ, ಡಿ. ೫: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ತಾ. ೭ ಹಾಗೂ ೮ ರಂದು ನಡೆಯಲಿವೆ.

ತಾ. ೭ ರಂದು ಹೊದ್ದೂರು ೧ ವಾರ್ಡ್ ಸಭೆ ಕಬ್ಬಡಕೇರಿ ದವಸ ಭಂಡಾರ ಕಟ್ಟಡದಲ್ಲಿ ಸದಸ್ಯ ಎಂ.ಬಿ. ಹಮೀದ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೩ ಗಂಟೆಗೆ, ಹೊದ್ದೂರು ೨ ವಾರ್ಡ್ ಸಭೆ ವಾಟೇಕಾಡು ಸಮುದಾಯ ಭವನದಲ್ಲಿ ಸಂಜೆ ೫ ಗಂಟೆಗೆ ಸದಸ್ಯೆ ಹೆಚ್.ಜಿ. ಅನುರಾಧ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ. ೮ ರಂದು ಹೊದವಾಡ ೨ ರ ವಾರ್ಡ್ ಸಭೆ ಕೊಟ್ಟಮುಡಿ ಸ.ಹಿ.ಪ್ರಾ. ಶಾಲೆ ಆವರಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಸದಸ್ಯ ಕೆ.ಎಂ. ಮೊಯ್ದು ಅಧ್ಯಕ್ಷತೆಯಲ್ಲಿ, ಹೊದವಾಡ ೧ ವಾರ್ಡ್ ಸಭೆ ಅಜಾದ್ ನಗರ ಶಾದಿಮಹಲ್ ಕಟ್ಟಡದಲ್ಲಿ ಮಧ್ಯಾಹ್ನ ೨ ಗಂಟೆಗೆ ಸದಸ್ಯೆ ಹೆಚ್.ಎಂ. ಸರಸು ಅಧ್ಯಕ್ಷತೆಯಲ್ಲಿ, ಕುಂಬಳದಾಳು ವಾರ್ಡ್ ಸಭೆ ಕುಯ್ಯಂಗೇರಿ ದವಸ ಭಂಡಾರ ಕಟ್ಟಡದಲ್ಲಿ ಸಂಜೆ ೪ ಗಂಟೆಗೆೆ ಸದಸ್ಯ ಕೆ.ಪಿ. ಪಾರ್ವತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.