ಕೂಡಿಗೆ, ಡಿ. ೫: ಮೂರು ತಿಂಗಳು ಕಳೆದರೂ ವೇತನ ಪಾವತಿಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ನೀರುಗಂಟಿಗಳಿಗೆ ಕಳೆದ ಮೂರು ತಿಂಗಳುಗಳಿAದ ಸಂಬಳ ನೀಡದ ಹಿನ್ನೆಲೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.

ಕೆಲ ಕಾಲ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಸಂಬಳದ ಹಣವನ್ನು ನೀಡುವಂತೆ ಗ್ರಾ.ಪಂ.ಗೆ ಸಂಬAಧಿಸಿದ ಅಧಿಕಾರಿಗೆ ಮನವಿಯ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಭರತ್, ಪೌರ ಕಾರ್ಮಿಕರಾದ ಮಂಜುನಾಥ, ಗಣೇಶ್, ರವಿ, ನೀರುಗಂಟಿಗಳಾದ ಬಾಪು, ನಾಗೇಶ್, ವಿಶ್ವ, ಅಬ್ದುಲ್ ಖಾದರ್, ವಿಚು, ವಿಶ್ವನಾಥ, ಬಿ.ಸಿ. ನಾಗೇಶ್ ಹಾಜರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಕ್ರಿಯಿಸಿ, ಇವರುಗಳಿಗೆ ಸಂಬAಧಿಸಿದ ಹಣವನ್ನು ಪಾವತಿಸಲು ಈಗಾಗಲೇ ಆನ್‌ಲೈನ್ ಮೂಲಕ ಹಣವನ್ನು ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮಕೈಗೊಳ್ಳುವ ಉದ್ದೇಶದಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ಹಣವನ್ನು ಖಾತೆಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.