ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಮಡಿಕೇರಿ, ಡಿ. ೫ : ಉಕ್ಕುಡದ ನಿವಾಸಿ ನಿವೃತ್ತ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿವೆ.

ಪAಪಿನಕೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಸಂದೇಶ್ ಸಾವಿಗೂ ಮುನ್ನ ಡೆತ್ ನೋಟ್ ಬರೆದು ಜೀವಿತಾ ಎಂಬಾಕೆ ಪ್ರೀತಿ ಹೆಸರಿನಲ್ಲಿ ಬೆದರಿಸಿ ಹನಿಟ್ರಾö್ಯಪ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಅಮ್ಮ, ತಂಗಿ ಕೂಡ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ, ಇನ್ನೂ ಕೆಲವರ ಹೆಸರನ್ನು ಉಲ್ಲೇಖಿಸಿದ್ದರು. ಅದರಂತೆ ತನಿಖೆಕೈಗೊಂಡ ಪೊಲೀಸರು ಆರೋಪಿಗಳಾದ ಜೀವಿತಾ, ಆಕೆಯ ತಾಯಿ ಮಂಜುಳಾ, ಅಣ್ಣ ಪ್ರವೀಣ್ ಹಾಗೂ ಇವರುಗಳು ಪರಾರಿಯಾಗಲು ಸಹಕರಿಸಿದ್ದ ಜೀವಿತಾಳ ಸಹೋದರಿ ಸಂಬAಧಿ ದಿವ್ಯಾ, ಸ್ನೇಹಿತ ಅಯ್ಯಪ್ಪ ಎಂಬವರುಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ಮುಂದುವರೆಸಿದ್ದ ಪೊಲೀಸರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ರೆಸಾರ್ಟ್ ಮಾಲೀಕ ಸತ್ಯ, ಪೊಲೀಸ್ ಸತೀಶ್ ಎಂಬವರುಗಳ ಸೆರೆಗೆ ಬಲೆ ಬೀಸಿದ್ದರು. ಸತ್ಯ ತಲೆಮರೆಸಿಕೊಂಡಿದ್ದು, ಪೊಲೀಸರ ತನಿಖಾ ತಂಡ ಆರೋಪಿಯ ಬೆನ್ನು ಹತ್ತಿದೆ. ಆದರೆ ಪೊಲೀಸ್ ಸತೀಶ್ ಯಾರು ಎಂಬ ಕುರಿತು ಪೊಲೀಸರಿಗೆ ಇನ್ನೂ ಕೂಡ ಖಚಿತ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ. ಈ ನಡುವೆ ಕಾರಾಗೃಹದಲ್ಲಿರುವ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಸತ್ಯ ಜಾಮೀನು ಕೋರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ. ೨೯ರಂದು ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.