ಮಡಿಕೇರಿ, ಡಿ. ೫ : ಕೊಡಗು - ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ‘ಶಕ್ತಿ’ಗೆ ಈ ಕೆಳಗಿನ ಲಿಖಿತ ಹೇಳಿಕೆ ಕಳುಹಿಸಿದ್ದಾರೆ.

ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಕೆಲವು ರಾಜಕೀಯ ಪ್ರಮುಖರು ಜನಾಂಗವನ್ನು ದಾರಿ ತಪ್ಪಿಸುತ್ತಿದ್ದು, ಪ್ರತಿಕ್ರಿಯಾತ್ಮಕವಾಗಿ ಈ ಕೆಳಕಂಡ ಮಾಹಿತಿಯನ್ನು ಕೊಡವ ಜನಾಂಗದವರಿಗೆ ತಲುಪಿಸಲು ಇಚ್ಚಿಸುತ್ತೇನೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಡಿ ರಾಜ್ಯ ಸರ್ಕಾರದ ೨೦೨೨-೨೩ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ -೧೭೩ರಲ್ಲಿ ಘೋಷಿಸಿದಂತೆ ರೂ.೧೦೦೦.೦೦ ಲಕ್ಷಗಳ ಅನುದಾನದಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲು ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.

ಅದರಂತೆ ೨೦೨೨-೨೩ ನೇ ಸಾಲಿನ ರಾಜ್ಯವಲಯ ಲೆಕ್ಕಶೀರ್ಷಿಕೆ: “ಆಪ್ಟೆಕ್ಟಿವ್ ಕೋಡ್ ೧೦೩’’ರಡಿ ಒದಗಿಸಿರುವ ಅನುದಾನ ರೂ. ೧೦೦೦.೦೦ ಲಕ್ಷಗಳ ಅನುದಾನದಲ್ಲಿ ಈ ಕೆಳಕಂಡAತೆ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರ ಖಜಾನೆ-೨ ಕೋಡ್ ಸಂಖ್ಯೆ: ೩೪೮೬೫ಕ್ಕೆ ಬಿಡುಗಡೆಗೊಳಿಸಿ, ಸದರಿ ಅನುದಾನವನ್ನು ಕಾರ್ಯಕ್ರಮದ ಅನುಷ್ಠಾನ ಏಜೆನ್ಸಿಯವರಾದ ಯೋಜನಾ ನಿರ್ದೇಶಕರು ಕೊಡಗು ನಿರ್ಮಿತಿ ಕೇಂದ್ರ ಮಡಿಕೇರಿ ಇವರ ದಿನಾಂಕ: ೨೦/೦೩/೨೦೨೩ರಂದು ಖಾತೆಗೆ ಜಮಾ ಮಾಡಲಾಗಿರುತ್ತದೆ (Uಖಿಖ ಓo. ಖಃI೧೦೮೦೨೩೬೩೯೩೯೪೧೩). ಸದರಿಯವರು ಉದ್ದೇಶಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂಬAಧ ಅಂದಾಜು ಪ್ರತಿಯನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ, ಮಡಿಕೇರಿ ಇವರಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಕೊಡವ ಸಮಾಜಗಳ ಒಕ್ಕೂಟಕ್ಕೆ ಕೊಡವ ಸಾಂಸ್ಕೃತಿಕ/ಮ್ಯೂಸಿಯA ಇತ್ಯಾದಿ ಅಭಿವೃದ್ಧಿಗಾಗಿ ರೂ.೬೦೦.೦೦ ಲಕ್ಷಗಳು. ಭಾಗಮಂಡಲದಲ್ಲಿ ಕೊಡವ ಸಭಾ ಭವನ ನಿರ್ಮಾಣಕ್ಕೆ ರೂ.೧೦೦.೦೦ ಲಕ್ಷಗಳು. ಪ್ರತಿ ಭವನಕ್ಕೆ ರೂ.೧೦.೦೦ ಲಕ್ಷಗಳಂತೆ ೩೦ ಕೊಡವ ಸಮಾಜದ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.೩೦೦.೦೦ ಲಕ್ಷಗಳು. ‘‘ಮೇಲ್ಕಂಡ ಪ್ರಸ್ತಾವನೆಯ ಆದೇಶದ ಪ್ರತಿಗಳು ಹಾಗೂ ರೂ.೧೦೦೦.೦೦ ಲಕ್ಷಗಳು ನಿರ್ಮಿತಿ ಕೇಂದ್ರ, ಕೊಡಗು ಜಿಲ್ಲೆ ಅವರ ಖಾತೆಗೆ ಜಮಾಗೊಂಡಿರುವ ಮಾಹಿತಿಯ ಅಧಿಕೃತ ದಾಖಲಾತಿಗಳು ನನ್ನ ಬಳಿಯಿವೆ’’ ಎಂದು ಪ್ರತಾಪ್ ಸಿಂಹ ವಿವರಿಸಿದ್ದಾರೆ.