ಬೆಂಗಳೂರು, ಡಿ. ೫: ಜುಲೈ ೧೪ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಎಲ್.ವಿ.ಎಮ್-೩ ರಾಕೆಟ್ ಮೂಲಕ ಚಂದ್ರಯಾನ-೩ ನೌಕೆಯು ಉಡಾವಣೆಗೊಂಡಿದ್ದು, ಅದರ ಭಾಗವಾದ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದತ್ತ ಆಗಸ್ಟ್ ೨೩ಕ್ಕೆ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿತು. ದಕ್ಷಿಣ ಧ್ರುವದತ್ತ ತಲುಪಿದ ಮೊದಲ ದೇಶ ಎಂದು ಭಾರತ ಪ್ರಖ್ಯಾತಿ ಪಡೆಯಿತು. ಕೆಲ ದಿನಗಳ ನಂತರ ವಿಕ್ರಂ ಲ್ಯಾಂಡರ್ ಒಳಗಿದ್ದ ಪ್ರಗ್ಯಾನ್ ರೋವರ್ ಚಂದ್ರನೆಲ ಸ್ಪರ್ಶಿಸಿ, ಚಲಿಸಿ ಹಲವಾರು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿತು. ನೌಕೆಯ ಮತ್ತೊಂದು ಭಾಗ ಭೂಮಿಯಿಂದ ಚಂದ್ರನೆಡೆಗೆ ಲ್ಯಾಂಡರ್ ಹಾಗೂ ರೋವರ್ ಅನ್ನು ಕೊಂಡೊಯ್ದಿದ್ದಲ್ಲದೆ ಚಂದ್ರನ ಸುತ್ತದ ಕಕ್ಷೆಯಲ್ಲಿ ಹಲವು ದಿನ ಲ್ಯಾಂಡರ್, ರೋವರ್ ಅನ್ನು ಸುರಕ್ಷಿತವಾಗಿರಿಸಿದ್ದ ಪ್ರೊಪಲ್ಶನ್ ಮಾಡ್ಯೂಲ್ ಇದೀಗ ಮತ್ತೆ ಮರಳಿ ಭೂಮಿ ಕಕ್ಷೆಯನ್ನು ಸೇರಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ. ಚಂದ್ರನ ಸುತ್ತದ ಕಕ್ಷೆಯಲ್ಲಿ ಪ್ರೊಪಲ್ಶನ್ ಮಾಡ್ಯೂಲ್ ಚಲಿಸುತ್ತಿದ್ದಾಗ, ಅದರಲ್ಲಿನ Sಠಿeಛಿಣಡಿo-ಠಿoಟಚಿಡಿimeಣಡಿಥಿ oಜಿ ಊಚಿbiಣಚಿbಟe Pಟಚಿಟಿeಣ ಇಚಿಡಿಣh (SಊಂPಇ) ತಾಂತ್ರಿಕ ಯಂತ್ರದ ಮೂಲಕ ಭೂಮಿಯ ಅಧ್ಯಯನದಲ್ಲಿ ತೊಡಗಿತ್ತು. ಇದೀಗ ಭೂ-ಕಕ್ಷೆಯನ್ನು ಸೇರಿರುವ ಪ್ರೊಪಲ್ಶನ್ ಮಾಡ್ಯೂಲ್ ಅಧ್ಯಯನವನ್ನು ಮುಂದುವರಿಸಲಿದೆ. ನವೆಂಬರ್ ೧೦ ರಂದೇ ಚಂದ್ರನ ಕಕ್ಷೆಯಿಂದ ಹೊರಬಂದ ಪ್ರೊಪಲ್ಶನ್ ಮಾಡ್ಯೂಲ್ ನವೆಂಬರ್ ೨೨ಕ್ಕೆ ಭೂ-ಕಕ್ಷೆ ಸೇರಿರುವುದಾಗಿ ಇಸ್ರೋ ಮಾಹಿತಿ ಇತ್ತಿದೆ.

ಮಾದರಿ ವಾಪಸಾತಿ ಯೋಜನೆಗೆ ಸಹಕಾರಿ

ಚಂದ್ರನೆಲಕ್ಕೆ ಲ್ಯಾಂಡರ್ ಕಳಿಸಿ, ರೋವರ್ ಮೂಲಕ ಚಂದ್ರ ನೆಲದ ಸಂಶೋಧನೆ ನಡೆಸುವುದು ಚಂದ್ರಯಾನ-೩ರ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದು ಶೇ.೧೦೦ ರಷ್ಟು ಯಶಸ್ವಿಯಾಯಿತು. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿದ ಇಸ್ರೋ, ಸೆಪ್ಟೆಂಬರ್ ತಿಂಗಳಿನಲ್ಲಿ ಚಂದ್ರನಲ್ಲಿ ನೆಲೆ ಕಂಡಿದ್ದ ಲ್ಯಾಂಡರ್ ಅನ್ನು ಚಂದ್ರನೆಲದಿAದ ಕೆಲ ಮೀಟರ್ ಮೇಲಕ್ಕೆ ಜಿಗಿಸುವ ಪ್ರಯತ್ನ ಮಾಡಿ ಸಫಲತೆ ಕಂಡಿತು. ಚಂದ್ರಯಾನ-೩ ಯೋಜನೆಯಲ್ಲಿ ಯಾವುದೇ ರೀತಿಯ ಚಂದ್ರನ ಮಾದರಿಯನ್ನು ಭೂಮಿಗೆ ವಾಪಸ್ಸು ತರುವ ಗುರಿ ಇಲ್ಲದಿದ್ದರೂ, ಈ ಒಂದು ‘ಲ್ಯಾಂಡರ್ ಜಿಗಿತ’ ಪ್ರಯೋಗದಿಂದ ಮುಂದಿನ ದಿನಗಳಲ್ಲಿ ಮಾದರಿ ವಾಪಸಾತಿ ಯೋಜನೆ ಮಾಡುವ ಸಾಮರ್ಥ್ಯ ಇಸ್ರೋಗೆ ಇದೆ ಎಂಬುದಾಗಿ ಸಾಬೀತಾಯಿತು. ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಯಶಸ್ವಿ ಕಾರ್ಯಾಚರಣೆ ಬಳಿಕ ಚಂದ್ರನ ಕತ್ತಲಿನ ಚಳಿ ರಾತ್ರಿಯಲ್ಲಿ ನಿದ್ದೆಗೆ ಜಾರಿದ ಬಳಿಕವೂ ಚಂದ್ರ ಕಕ್ಷೆಯಲ್ಲಿಯೇ ಹಲವು ತಿಂಗಳು ಇದ್ದ ಪ್ರೊಪಲ್ಶನ್ ಮಾಡ್ಯೂಲ್, ಇದೀಗ ಭೂಮಿಯ ಕಕ್ಷೆ ತಲುಪಿದೆ. ಈ ಮೂಲಕ ಮಾದರಿ ವಾಪಸಾತಿ ಯೋಜನೆಯ ಒಂದು ರೀತಿಯ ಅಣಕು ಪ್ರದರ್ಶನ ನಡೆದಿದ್ದು, ಭವಿಷ್ಯದಲ್ಲಿ ಇಸ್ರೋ ನಡೆಸಲಿರುವ ಮಾದರಿ ವಾಪಸಾತಿ ಯೋಜನೆಗೆ ಸಹಕಾರಿಯಾಗಲಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.