ಮಡಿಕೇರಿ, ಡಿ. ೬: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಕಲಾ ಐಸಿರಿ’ ೨೦೨೩ ಬೆಂಗಳೂರಿನಲ್ಲಿ ನಡೆಯಿತು.
ಮಹಿಳಾ ಘಟಕದ ವತಿಯಿಂದ ಕಾವೇರಿ ಪೂಜೆ ನೆರವೇರಿಸಿ ಕಾವೇರಿ ತೀರ್ಥ ಹಾಗೂ ಪ್ರಸಾದ ಹಂಚಲಾಯಿತು. ಸಮಾಜದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಬಾಂಧವರು ಹಾಗೂ ಸ್ಪರ್ಧಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಸೋಮವಾರಪೇಟೆ ತಾಲೂಕು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಕುದುಕುಳಿ ಮಿಲನ ಭರತ್ ಮಾತನಾಡಿ, ನಮ್ಮ ಗೌಡ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಅರೆಭಾಷೆಯ ಬಳಕೆಯ ಮಹತ್ವ ಹಾಗೂ ಅಗತ್ಯತೆಯನ್ನು ವಿವರಿಸಿದರು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎಂದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಜ್ಯೋತಿ ಕುಶಾಲಪ್ಪ, ಯುವ ಘಟಕದ ಅಧ್ಯಕ್ಷೆ ನೇಹಾ ಪೋರೆಯನ ಹಾಗೂ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಗೋಪಾಲಕೃಷ್ಣ ಪಿತ್ತಿಲು ಉಪಸ್ಥಿತರಿದ್ದರು.
ಚಿತ್ರ ಬಿಡಿಸುವುದು, ರಂಗೋಲಿ, ಭರತ ನಾಟ್ಯ, ನೃತ್ಯ, ಹಾಡು, ಕಿರುನಾಟಕ, ರಸ ಪ್ರಶ್ನೆ, ಫ್ಯಾಷನ್ ಶೋ, ಸೋಬಾನೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಂಗಳೂರು, ಮೈಸೂರು, ಕೊಡಗು ಹಾಗೂ ಬೆಂಗಳೂರಿನಿAದ ಸ್ಪರ್ಧಿಗಳು ಭಾಗವಹಿಸಿದ್ದರು. ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಬಗ್ಗೆ ರಸಪ್ರಶ್ನೆ, ಆಶುಭಾಷಣ ಹಾಗೂ ಸಣ್ಣ ಮಕ್ಕಳಿಗೆ ಮುಖ ವರ್ಣಿಕೆ (ಜಿಚಿಛಿe ಠಿಚಿiಟಿಣiಟಿg) ಗಳು ವಿಶೇಷ ಆಕರ್ಷಣೆಯಾಗಿ ನೆರೆದಿದ್ದ ನೂರಾರು ಸಮಾಜ ಬಾಂಧವರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳಾ ಘಟಕ, ಯುವ ಘಟಕ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.