ಮಡಿಕೇರಿ, ಡಿ. ೫: ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಪಂದ್ಯಾವಳಿಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಶೂರ‍್ಸ್ಗಳು ಭಾಗವಹಿಸಿದ್ದರು.

ಗ್ಯಾಲೆಂಟ್ ಶೂರ‍್ಸ್ ತಂಡದ ಆಯೋಜನೆಯೊಂದಿಗೆ ನಡೆದ ಈ ಪಂದ್ಯಾವಳಿಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಕೂಡ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಪಾಯಿಂಟ್ ೨೨ನ ತೆಂಗಿನಕಾಯಿ ಹೊಡೆಯುವ ವಿಭಾಗದಲ್ಲಿ, ಪುಗ್ಗೇರ ದೇವ್ ಬೋಪಣ್ಣ ಮೊದಲ ಸ್ಥಾನಗಳಿಸಿದರೆ, ರಾಹುಲ್ ಅರಂ ಬೂರು ಹಾಗೂ ಪ್ರಸನ್ನ ಕುಮಾರ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು. ಪಾಯಿಂಟ್ ೨೨ ನ ಕ್ಲೇಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ಧನು ದೇವಯ್ಯ ಮೊದಲನೆಯ ಸ್ಥಾನ ಪಡೆದುಕೊಂಡರು. ಚೇತನ್ ಚೀಯಕಪೂವಂಡ ದ್ವಿತೀಯ ಸ್ಥಾನ ಪಡೆದರೆ, ಅಪ್ಪಂಡೇರAಡ ದಿನು ತೃತೀಯ ಸ್ಥಾನ ಪಡೆದುಕೊಂಡರು. ೧೨ ಬೊರ್‌ನ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ತೃಶಾಲಿ ತಂಗಮ್ಮ ಮೊದಲನೆಯ ಸ್ಥಾನ ಗಳಿಸಿದರೆ, ಮುದ್ದಂಡ ರಾಯ್ ತಿಮ್ಮಯ್ಯ ದ್ವಿತೀಯ ಹಾಗೂ ಆಪಟ್ಟಿರ ಪ್ರದೀಪ್ ತೃತೀಯ ಸ್ಥಾನ ಪಡೆದುಕೊಂqರು. ಏರ್ ರೈಫಲ್‌ನಲ್ಲಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುತ್ತರೀರ ನಂಜಪ್ಪ ಮೊದಲನೆಯ ಸ್ಥಾನ ಪಡೆದುಕೊಂಡರೆ, ಚಿರಂತ್ ಡಿ ಹಾಗೂ ಚೇತನ್ ಬಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಕೊಂಡರು. ಪಂದ್ಯಾವಳಿಯಲ್ಲಿ ಅಕ್ಷಿತಾ ಮೂಖಂಡ ಅವರಿಗೆ ‘ಅಪ್‌ಕಮ್ಮಿಂಗ್ ಶೂಟರ್’ ಪದವಿ ಯನ್ನು ನೀಡಲಾಯಿತು. ಅತ್ಯಂತ ಹಿರಿಯ ಶೂಟರ್ ಪದಕವನ್ನು ಯು.ಕೆ.ಲಿಂಗರಾಜ್ ಅವರು ಪಡೆದು ಕೊಂಡರೆ, ಕನ್ನಿಕಂಡ ಪೂವಣ್ಣ ಅತ್ಯಂತ ಕಿರಿಯ ಶೂಟರ್‌ನ ಪದವಿ ಪಡೆದುಕೊಂಡರು.

ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ನಾಪೋಕ್ಲು ಪೊಲೀಸ್ ಎಸ್.ಐ ಮಂಜುನಾಥ್, ಪ್ರಮುಖರಾದ ಕುಪ್ಪುಡಿರ ಪೊನ್ನು ಮುತ್ತಪ್ಪ, ಚೆಪ್ಪುಡಿರ ಪ್ರದೀಪ್, ನೆಲ್ಲಿರ ಧನು, ಅಜ್ಜೇಟಿರ ಮಂದಣ್ಣ, ಕರೋ ಟಿರ ಬೆಳ್ಳು, ಪುತ್ತರಿರ ರಾಜೇಶ್ ಹಾಗೂ ಕೇಚಿರ ವಿಜು ಭಾಗವಹಿಸಿದ್ದರು.