ಮಡಿಕೇರಿ, ಡಿ. ೫: ನಗರದ ಚೌಡೇಶ್ವರಿ ಗೌಡ ಕೂಟದ ಹತ್ತನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಪೂಜಾರಿರ ಜಗದೀಶ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇಜರ್ ಡಾಕ್ಟರ್ ಕುಶ್ವಂತ್ ಕೋಳಿಬೈಲು ಅವರು ಪಾಲ್ಗೊಂಡು ಮಾತನಾಡಿ ಗೌಡ ಜನಾಂಗ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರೊಂದಿಗೆ ಏಳಿಗೆ ಸಾಧಿಸಬೇಕು ಹಾಗೂ ಭಾಷೆ ಬೆಳೆದಾಗ ಸಮಾಜ ಬೆಳೆಯುತ್ತದೆ ಎಂದು ಹಿತನುಡಿಗಳನ್ನಾಡಿದರು.

ಸಭೆಯಲ್ಲಿ ಕೂಟದ ಸದಸ್ಯರು ಮತ್ತು ಕುಟುಂಬದವರಿಗೆ ಆಟೋಟ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರವನ್ನು ವಿತರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೂಟದ ಹಿರಿಯ ಸದಸ್ಯರಾದ ಡಾಕ್ಟರ್ ಸೂರ್ಯಕುಮಾರ್ ಹಾಗೂ ಮುಖ್ಯ ಅತಿಥಿಗಳಾದ ಕೃಷಿ, ಡಾ. ಕುಶ್ವಂತ್ ಕೋಳಿಬೈಲು ಅವರುಗಳನ್ನು ಸನ್ಮಾನಿಸಲಾಯಿತು. ಕೂಡಕಂಡಿ ದಯಾನಂದ ಅವರು ಸ್ವಾಗತಿಸಿ, ವಕೀಲ ಮುಕ್ಕಾಟಿ ಜಯಚಂದ್ರ ವಂದಿಸಿದರು.