ಮಡಿಕೇರಿ, ಡಿ. ೬: ರಕ್ತದಾನದಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಉಂಟಾಗುತ್ತದೆ ಎಂಬ ಮೌಢ್ಯತೆ ಮರೆತು, ಸಾಮಾಜಿಕ ಕಳಕಳಿಯ ಬದ್ಧತೆ ತೋರಬೇಕೆಂದು ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ೬೭ನೇ ಪರಿನಿರ್ವಾಣ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ನೇತ್ರದಾನ, ದೇಹದಾನ ನೋಂದಾವಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಕಾರ್ಯಕ್ರಮ ಹೆಚ್ಚಾಗಬೇಕು. ರಕ್ತ, ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಧÀರಿದ್ದು, ನಮ್ಮ ಸಾವಿನ ನಂತರ ಅವರಿಗೆ ಬೆಳಕಗಾಬಹುದು ಎಂದು ತಿಳಿಸಿದರು.
ದೇಶದಲ್ಲಿ ರಕ್ತದ ಬೇಡಿಕೆಯೂ ಹೆಚ್ಚಿದೆ. ಅದನ್ನು ನೀಗಿಸಲು ರಕ್ತದಾನಕ್ಕೆ ಆರೋಗ್ಯವಂತ ವ್ಯಕ್ತಿ ಮುಂದಾಗ ಮಡಿಕೇರಿ, ಡಿ. ೬: ರಕ್ತದಾನದಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಉಂಟಾಗುತ್ತದೆ ಎಂಬ ಮೌಢ್ಯತೆ ಮರೆತು, ಸಾಮಾಜಿಕ ಕಳಕಳಿಯ ಬದ್ಧತೆ ತೋರಬೇಕೆಂದು ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ೬೭ನೇ ಪರಿನಿರ್ವಾಣ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ನೇತ್ರದಾನ, ದೇಹದಾನ ನೋಂದಾವಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಕಾರ್ಯಕ್ರಮ ಹೆಚ್ಚಾಗಬೇಕು. ರಕ್ತ, ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಧÀರಿದ್ದು, ನಮ್ಮ ಸಾವಿನ ನಂತರ ಅವರಿಗೆ ಬೆಳಕಗಾಬಹುದು ಎಂದು ತಿಳಿಸಿದರು.
ದೇಶದಲ್ಲಿ ರಕ್ತದ ಬೇಡಿಕೆಯೂ ಹೆಚ್ಚಿದೆ. ಅದನ್ನು ನೀಗಿಸಲು ರಕ್ತದಾನಕ್ಕೆ ಆರೋಗ್ಯವಂತ ವ್ಯಕ್ತಿ ಮುಂದಾಗ ಮಾಹಿತಿ ಒದಗಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೇಕಲ್ಲು ನವೀನ್ ಕುಶಾಲಪ್ಪ ನೇತ್ರದಾನ, ದೇಹದಾನ ಮಾಡುವುದು ಮಹತ್ವದ ಕೆಲಸ. ದಸಂಸ ಸೇವಾ ಕಾರ್ಯಕ್ಕೆ ಹೀಗೆ ಮುಂದುವರೆಯಲಿ ಎಂದರು.
ಜಿಲ್ಲಾಸ್ಪತ್ರೆ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಮಾತನಾಡಿ, ಮನುಕುಲದ ಏಳಿಗೆಗೆ, ತುಳಿತಕ್ಕೆ ಒಳಗಾದವರ ಮೇಲೆತ್ತುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಮಾಡಿದ ತ್ಯಾಗ, ಸಮರ್ಪಣ ಮನೋಭಾವ ಸದಾ ಸ್ಮರಣೀಯ. ಅವರ ಮಹತ್ವಾಕಾಂಕ್ಷೆ ಕೆಲಸಗಳು ಇಂದಿಗೂ ಜೀವಂತವಾ ಗಿವೆ. ಅವರ ಆದರ್ಶ ಜೀವನದಲ್ಲಿ ರೂಢಿಸಿ ಕೊಳ್ಳಬೇಕು. ಮನುಷ್ಯತ್ವ, ಕರುಣೆ, ಮಾನವೀಯ ಗುಣಗಳಿಂದ ಪರಿ ಪೂರ್ಣ ಬದುಕು ಸಾಧ್ಯವಾಗುತ್ತದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮಧುಕರ್ ಶೇಟ್, ಯಾವುದೇ ಜಾತಿಗೆ ಸೀಮಿತವಾಗದೆ ಭಾರತೀಯ ಎಂಬ ದೃಢ ಸಂಕಲ್ಪ ಹೊಂದಿದರೆ ಸದೃಢ ಸಮಾಜ ನಿರ್ಮಿಸಬಹುದು. ಅಂಬೇಡ್ಕರ್ ಚಿಂತನೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಸ್ಥಾನೀಯ ವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಅಂಬೇಡ್ಕರ್ ಅವರ ಮುಂದಾಲೋಚನೆಯಿAದ ಉತ್ತಮ ಸಮಾಜ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಡಾ. ದೇವದಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನೇತ್ರ ತಜ್ಞ ಡಾ. ನಿರಂಜನ್, ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಹಾಜರಿದ್ದರು.