ಸೋಮವಾರಪೇಟೆ, ಡಿ. ೫: ಮಂಡಲ ಮಾಸದ ಅಂಗ ವಾಗಿ ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇದೇ ಪ್ರಥಮ ಬಾರಿಗೆ ದೀಪೋತ್ಸವ ಆಚರಿಸಲಾ ಯಿತು. ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರ ಸಹಕಾರದಿಂದ ದೀಪಗಳನ್ನು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಭುವನೇ ಶ್ವರಿ ದೇವಿ, ಕನ್ನಿಮೂಲ ಗಣಪತಿ ಮತ್ತು ನಾಗರಾಜನ ಸನ್ನಿಧಿಯಲ್ಲಿ ಮತ್ತು ಪದಿನೆಟ್ಟಾಂ ಪಡಿಯಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಹೊತ್ತಿಸಲಾಯಿತು. ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕ ಮಣಿ ಕಂಠನ್ ನಂಬೂದರಿ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.