ಮುಳ್ಳೂರು, ಡಿ. ೬: ಸಮೀಪದ ದುಂಡಳ್ಳಿ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷಾ ಗ್ರಾ.ಪಂ.ಯ ಅಭಿವೃದ್ಧಿ ಕಾಮಗಾರಿ ಕುರಿತಾದ ಕ್ರಿಯಾಯೋಜನೆ, ಸರಕಾರದಿಂದ ಬಂದ ಆದೇಶ ಪತ್ರಗಳ ಬಗ್ಗೆ ಮಾಹಿತಿ ನೀಡಿದರು ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಸದಸ್ಯರು ಚರ್ಚಿಸಿದರು. ದುಂಡಳ್ಳಿ ಗ್ರಾ.ಪಂ. ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ, ಗ್ರಾ.ಪಂ. ಅನುದಾನದ ಕೊರತೆಯ ನಡುವೆ ಕಾರ್ಮಿಕರಿಗೆ ವೇತನ ನೀಡುತ್ತಿರುವ ಬಗ್ಗೆ ಚರ್ಚಿಸಲಾಯಿತು. ಈ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಸರಕಾರದಿಂದ ಸದರಿ ಗ್ರಾ.ಪಂ.ಅಮೃತ ಗ್ರಾಮ ಯೋಜನೆಯಡಿಯಲ್ಲಿ ಬಂದಿದ್ದ ಅನುದಾನದಲ್ಲಿ ರೂ. ೧೩ ಲಕ್ಷ ಬಳಕೆಯಾಗಿದ್ದು ಇದರ ಬಗ್ಗೆ ಮಾಹಿತಿ ಆಗಿನ ಅವಧಿಯಲ್ಲಿದ್ದ ಅಧ್ಯಕ್ಷರಿಂದ ಇನ್ನೂ ದೊರೆಯದಿರುವ ಕುರಿತಾಗಿ ಹಿರಿಯ ಸದಸ್ಯ ಡಿ.ಬಿ.ಬೋಜಪ್ಪ ಪ್ರಸ್ತಾಪಿಸಿದರು. ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಬಗ್ಗೆ, ಗ್ರಾಮಸಭೆ ನಡೆಸುವ ಬಗ್ಗೆ, ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಸಿ.ಜೆ. ಗಿರೀಶ್, ಡಿ.ಬಿ. ಬೋಜಪ್ಪ, ಎಸ್.ಪಿ. ಭಾಗ್ಯ, ದೇವರಾಜ್, ನಂದಿನಿ ನಾಗರತ್ನ, ಭವಾನಿ, ಪಿಡಿಒ ಎಂ.ಕೆ. ಆಯಿಷ, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.