ಚೆಯ್ಯಂಡಾಣೆ, ಡಿ. ೬: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಮೊದಲ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಮಡಿಕೇರಿ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ವಹಿಸಿ ಮಾತನಾಡಿದರು. ಹಣಕಾಸು ಯೋಜನೆಯ ವರದಿ ಯನ್ನು ಹಾಗೂ ಕಾಮಗಾರಿಯ ಲೆಕ್ಕ ಪತ್ರದ ಮಾಹಿತಿಯನ್ನು ಸಾಮಾಜಿಕ ಲೆಕ್ಕ ಪರಿಶೋಧಕಿ ನುಸೈಬ ಮಂಡಿಸಿದರು. ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಸುಂದರೇಶ್ ಮಾತನಾಡಿ, ಲೆಕ್ಕ ಪರಿಶೋಧನಾ ವರದಿಯಲ್ಲಿ ಎರಡು ಮೂರು ಸಣ್ಣ ಕಾಮಗಾರಿಗಳ ತಕರಾರುಗಳನ್ನು ಹೊರತುಪಡಿಸಿ ಉಳಿದ ಲೆಕ್ಕದ ಮಾಹಿತಿ ಪರಿಪೂರ್ಣವಾಗಿರು ದರಿಂದ ಲೆಕ್ಕಪತ್ರದ ನಡವಳಿಕೆ ಅನುಮೋದನೆ ನೀಡಲಾಯಿತು.

ರಸ್ತೆಯ ಕಾಂಕ್ರೀಟ್ ಕಾಮಗಾರಿ ಕಳಪೆಯಿಂದ ಕೂಡಿದ ಬಗ್ಗೆ ಸಭೆಯಲ್ಲೆ ಯೋಜನಾಧಿಕಾರಿಗಳು ಮಾಹಿತಿ ನೀಡಿದಾಗ ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಅಶೋಕ್ ಕೂಡಲೇ ಕಳಪೆ ಕಾಮಗಾರಿಯನ್ನು ಸರಿಪಡಿಸ ಲಾಗುವುದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.