ಸೋಮವಾರಪೇಟೆ, ಡಿ. ೬: ಶತಮಾನದ ಹಿಂದೆ ನಿರ್ಮಾಣವಾಗಿ ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರು ಕಬ್ಬಿಣ ಸೇತುವೆಗೆ ಕೊನೆಗೂ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ. ಚೋರನಹೊಳೆಗೆ ಅಡ್ಡಲಾಗಿ ರೂ.೧೦ ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಮನವಿಗೆ ಸೂಕ್ತ ಸ್ಪಂದನೆ ದೊರೆತಿದೆ.
ಸೋಮವಾರಪೇಟೆ ತಾಲೂಕಿನ ರಾಜ್ಯ ಹೆದ್ದಾರಿ ೨೭ರ ಐಗೂರು ಪಂಚಾಯಿತಿ ವ್ಯಾಪ್ತಿಯ ಕಬ್ಬಿಣ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಸೇತುವೆಯ ತಳಭಾಗದಲ್ಲಿ ಕಬ್ಬಿಣ ತುಕ್ಕು ಹಿಡಿದು, ಕಲ್ಲುಗಳು ಸಡಿಲಗೊಂಡಿವೆ. ಈ ಮಧ್ಯೆ ಕಳೆದ ವಾರ ಸೇತುವೆಗೆ ಹೊಂದಿಕೊAಡAತೆ ರಸ್ತೆಯ ಮಧ್ಯೆ ಗುಂಡಿ ಉಂಟಾಗಿ ವಾಹನಗಳ ಸಂಚಾರಕ್ಕೆ ಕೆಲಕಾಲ ತಡೆಯಾಗಿತ್ತು. ಈ ಸಂದರ್ಭ ವಾಹನಗಳು ಕಾಜೂರು ಮಾರ್ಗವಾಗಿ ಬದಲಿ ರಸ್ತೆಯಲ್ಲಿ ತೆರಳಬೇಕಾಯಿತು. ಈ ಬದಲಿ ರಸ್ತೆಯಲ್ಲಿರುವ ಸೇತುವೆಯೂ ಸಹ ಶಿಥಿಲಗೊಂಡಿದ್ದು, ಆತಂಕದಿAದಲೇ ಸಂಚರಿಸು ವಂತಾಗಿತ್ತು.
ರಸ್ತೆ ಮಧ್ಯೆ ಗುಂಡಿ ಬಿದ್ದ ಸಂದರ್ಭ ಶಾಸಕ ಮಂಥರ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ತುರ್ತು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂದರ್ಭ ಸೇತುವೆಯ ಶಿಥಿಲಾವಸ್ಥೆಯ ಬಗ್ಗೆ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನ ಸೆಳೆದು ಮನವಿ ಸಲ್ಲಿಸಿದ ಹಿನ್ನೆಲೆ, ರೂ. ೧೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ.
ಶಾಸಕ ಮಂಥರ್ ಗೌಡ ಅವರ ಮನವಿ ಪತ್ರವನ್ನು ಉಲ್ಲೇಖಿಸಿ ಲೋಕೋ ಪಯೋಗಿ
(ಮೊದಲ ಪುಟದಿಂದ) ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಂಪರ್ಕ ಮತ್ತು ಕಟ್ಟಡ(ದಕ್ಷಿಣ) ವಿಭಾಗದ ಮುಖ್ಯ ಇಂಜಿನಿಯರ್ ಅವರಿಗೆ ಆದೇಶ ನೀಡಿದ್ದು, ನಿಬಂಧನೆಗೊಳಪಟ್ಟು ರೂ. ೧೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಇತರೆ ಕಾಮಗಾರಿಯ ಅನುದಾನ ಬಳಕೆ: ಐಗೂರು ಕಬ್ಬಿಣ ಸೇತುವೆಯ ಸಮಸ್ಯೆ ಬಗೆಹರಿಸಲು ಇಲಾಖೆಯಿಂದ ನೇರವಾಗಿ ಅನುದಾನ ಬಿಡುಗಡೆಯಾಗಿಲ್ಲ. ಈಗಾಗಲೇ ಅನುಮೋದನೆಗೊಂಡು ಒಟ್ಟಾರೆ ಇಲಾಖೆ ವ್ಯಾಪ್ತಿಯಡಿ ಪ್ರಾರಂಭಗೊಳ್ಳದಿರುವ, ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಬದಲಿಗೆ ಈ ಸೇತುವೆ ಕಾಮಗಾರಿಯನ್ನು ಕೈಗೊಳ್ಳುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದರನ್ವಯ ಈಗಾಗಲೇ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಾಗಿ, ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿ, ಕಾಮಗಾರಿ ಆರಂಭವಾಗದೇ ಇರುವ ಕಾಮಗಾರಿಗಳ ಅನುದಾನವನ್ನು ಬಳಸಿಕೊಳ್ಳಬೇಕಿದೆ.
ಒಟ್ಟಾರೆ ಐಗೂರು ಚೋರನಹೊಳೆಗೆ ಅಡ್ಡಲಾಗಿ ಶತಮಾನದ ಹಿಂದೆ ನಿರ್ಮಾಣಗೊಂಡಿದ್ದ ಕಬ್ಬಿಣ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಾಣಕ್ಕೆ ಕೊನೆಗೂ ಕಾಲಕೂಡಿ ಬಂದಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಗಮನ ಸೆಳೆದು, ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದು, ಆ ಮೂಲಕ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಕ್ರಮವಹಿಸಿದ್ದಾರೆ.