ಸೋಮವಾರಪೇಟೆ, ಡಿ. ೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಸಾಂದೀಪನಿ ಶಾಲಾ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು. ಕನ್ನಡ ಭಾಷೆಯಲ್ಲಿ ಶೇ. ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ರಕ್ಷಾ ಡಿ.ಸಿ. ಪ್ರಥಮ ಸ್ಥಾನ ಪಡೆದರು. ಪ್ರಾಥಮಿಕ ಶಾಲಾ ವಿಭಾಗದ ಸಮೂಹ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರೌಢಶಾಲಾ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಪ್ರಾಥಮಿಕ ಶಾಲಾ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದರು.
ಚಿತ್ರಕಲೆಯಲ್ಲಿ ಪ್ರಜ್ಞಾ ಕೆ.ಟಿ. (ದ್ವಿ) ಛದ್ಮವೇಷ ಸ್ಪರ್ಧೆಯಲ್ಲಿ ಆದಿತ್ಯ ಕೆ.ಜಿ. (ತೃ) ಹಾಗೂ ಸಾರ್ವಜನಿಕರ ವಿಭಾಗದಲ್ಲಿ ಶಿಕ್ಷಕರ ತಂಡ (ದ್ವಿ) ಸ್ಥಾನವನ್ನು ಪಡೆದುಕೊಂಡಿತು.
ಬಹುಮಾನ ವಿತರಣೆ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ರಜಿತ್ ಹಾಗೂ ವ್ಯವಸ್ಥಾಪಕ ರಾಮ್ಪ್ರಸಾದ್ ಇದ್ದರು.