ಮಡಿಕೇರಿ, ಡಿ. ೪: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಭತ್ತದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹಲವು ಸಮಸ್ಯೆಗಳ ನಡುವೆಯೂ ಕೆಲವರು ರೈತರು ಭತ್ತದ ಕೃಷಿ ಮಾಡಿದ್ದು, ಇದೀಗ ಕಟಾವಿನ ಹಂತಕ್ಕೆ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಭತ್ತದ ಕೃಷಿಯಲ್ಲಿ ಶೇಕಡ ೪೦ರಷ್ಟು ಇಳಿಮುಖವಾಗಬಹುದೆಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ೧೯,೧೦೦ ಹೆಕ್ಟೇರ್‌ನಲ್ಲಿ ಮಾತ್ರ ಈ ಬಾರಿ ಭತ್ತವನ್ನು ಬೆಳೆಯಲಾಗಿದೆ. ಮುಂಗಾರು ಆರಂಭದ ಹಂತದಿAದಲೇ ಈ ಬಾರಿ ಮಳೆಯ ಕೊರತೆ ಎದುರಾಗಿದ್ದು, ಬರದ ಪರಿಸ್ಥಿತಿಯಿಂದಾಗಿ ಭತ್ತದ ಕೃಷಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಸರಕಾರ ಹಲವು ಜಿಲ್ಲೆಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ಇದರಲ್ಲಿ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳೂ ಸೇರ್ಪಡೆಯಾಗಿವೆ. ನಿರೀಕ್ಷಿತ ಗುರಿಗಿಂತ ಶೇ.೬೭ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಕೆಲಸ ಜಿಲ್ಲೆಯಲ್ಲಿ ಆಗಿದೆ ಎಂದು ಅಂದಾಜಿಸಲಾಗಿದೆ.

(ಮೊದಲ ಪುಟದಿಂದ) ಇದೀಗ ನವೆಂಬರ್ ಅಂತ್ಯದಿAದ ಹಲವೆಡೆಗಳಲ್ಲಿ ಭತ್ತದ ಕಟಾವು ಆರಂಭಗೊAಡಿದೆ. ಸಮಸ್ಯೆಗಳ ನಡುವೆ ಬೆಳೆದು ಇದೀಗ ಕುಯಿಲಿನ ಹಂತಕ್ಕೆ ಬಂದಿರುವ ಫಸಲನ್ನು ಮನೆ ತುಂಬಿಸಿಕೊಳ್ಳುವತ್ತ ರೈತರು ಮುಂದಾಗಿದ್ದಾರೆ. ಆದರೆ, ಇದೀಗ ಮೋಡ ಕವಿದ ವಾತಾವರಣ ಎದುರಾಗುತ್ತಿದ್ದು, ರೈತರು ಆತಂಕಪಡುವAತಾಗಿದೆ. ಈ ಸಮಯದಲ್ಲಿ ಅನಿರೀಕ್ಷಿತವಾಗಿ ಮಳೆಯಾದಲ್ಲಿ ಇರುವ ಫಸಲಿಗೆ ಭಾರೀ ಧಕ್ಕೆಯಾಗಲಿದೆ. ಬಹುತೇಕ ನವೆಂಬರ್ ಅಂತ್ಯದಿAದ ಡಿಸೆಂಬರ್ ತಿಂಗಳಿನಲ್ಲಿ ಭತ್ತದ ಕಟಾವು ನಡೆಯಲಿದೆ. ವಿವಿಧ ತಳಿಗಳ ಭತ್ತದ ಬೆಳೆ ಪ್ರಸ್ತುತ ಎಲ್ಲೆಡೆ ಕಟಾವಿನ ಹಂತಕ್ಕೆ ತಲುಪಿದ್ದು, ಈ ಕೆಲಸ ಪ್ರಗತಿಯಲ್ಲಿರುವುದಾಗಿ ಜಂಟಿ ಕೃಷಿ ನಿರ್ದೇಶಕರಾದ ಸೋಮಸುಂದರ್ ಅವರು ತಿಳಿಸಿದ್ದಾರೆ.

ಸದ್ಯದ ವಾತಾವರಣದಿಂದಾಗಿ ರೈತರು ಈ ಕೆಲಸ ಮುಂದುವರಿಸುವ ನಿಟ್ಟಿನಲ್ಲಿ ತೊಯ್ದಾಟ ಎದುರಿಸುವಂತಾಗಿದೆ. ಆದರೂ, ಬೆಳೆದ ಫಸಲನ್ನು ಮನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ತ್ವರಿತ ಕೆಲಸ ಸಾಗುತ್ತಿದೆ. ಕೆಲವು ತಳಿಗಳು ಇದೀಗ ತಾನೆ ಕುಯಿಲಿನ ಹಂತಕ್ಕೆ ಬರುತ್ತಿದ್ದು, ಈ ಬಗ್ಗೆಯೂ ರೈತರು ಆತಂಕದಿAದಲೇ ಇರುವಂತಾಗಿದೆ.