ಸಿಗದೆ, ಸಾಲಗಾರರ ಒತ್ತಡಕ್ಕೆ ಸಿಲುಕಿದ್ದಾರೆ.

ಕಳೆದ ಅಕ್ಟೋಬರ್ ೧೬ರಿಂದ ೨೪ರವರೆಗೆ ಮಡಿಕೇರಿ ದಸರಾ ಉತ್ಸವ ಈ ಬಾರಿ ವಿಜೃಂಭಣೆಯಿAದ ನಡೆದಿದೆ. ಖ್ಯಾತ ಗಾಯಕರಾದ ವಿಜಯಪ್ರಕಾಶ್, ಚಂದನ್‌ಶೆಟ್ಟಿ, ಕಲಾವಿದ ಡ್ರಮ್ ದೇವ ಸೇರಿದಂತೆ ಹಲವಾರು ಮಂದಿ ರಾಜ್ಯಮಟ್ಟದ ಕಲಾವಿದರು ಹಾಗೂ ಜಿಲ್ಲೆಯ ಹಲವಷ್ಟು ಕಲಾವಿದರು ಕಾರ್ಯಕ್ರಮ ಗಳನ್ನು ನೀಡಿ ದಸರಾಗೆ ಮೆರುಗು ನೀಡಿದ್ದರು. ಇದರೊಂದಿಗೆ ವಿವಿಧ ಉಪ ಸಮಿತಿಗಳಾದ ಕ್ರೀಡಾ ಸಮಿತಿ, ಕವಿಗೋಷ್ಠಿ, ಅಲಂಕಾರ ಸಮಿತಿಯವರು ಕ್ರೀಡೆ, ಅಲಂಕಾರ ಸ್ಪರ್ಧೆ ಹಾಗೂ ಕವಿಗೋಷ್ಠಿಯನ್ನು ನಡೆಸಿಕೊಟ್ಟಿದ್ದರು. ದಶ ಮಂಟಪ ಸಮಿತಿ ಮಾರ್ಗದರ್ಶನದಲ್ಲಿ ಹತ್ತು ದೇವಾಲಯಗಳ ವತಿಯಿಂದ ಉತ್ಸವ ಮಂಟಪಗಳನ್ನು ಹೊರಡಿಸುವ ಮೂಲಕ ಶೋಭಾಯಾತ್ರೆಗೆ ಮೆರುಗು ನೀಡಲಾಗಿತ್ತು. ವಿಜೃಂಭಣೆಯ ದಸರಾ ಮುಗಿದು ಇದೀಗ ನಲವತ್ತು ದಿನಗಳು ಕಳೆದರೂ ಇನ್ನೂ ಕೂಡ ಉಪ ಸಮಿತಿಗಳ ಬಿಲ್ ಹಾಗೂ ದಶಮಂಟಪಗಳಿಗೆ ನೀಡಬೇಕಾದ ಅನುದಾನವನ್ನು ನೀಡಿಲ್ಲ. ದೊಡ್ಡ ಕಲಾವಿದರ ಎರಡು ಬಿಲ್‌ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳ ಖಾತೆಯಿಂದ ಬಿಡುಗಡೆಯಾಗಿರುವದು ಹೊರತು ಪಡಿಸಿದರೆ, ಇನ್ಯಾವದೇ ಹಣ ಪಾವತಿಗೆ ದಸರಾ ಸಮಿತಿ ಮುಂದಾಗ ದಿರುವದು ಮಡಿಕೇರಿ ದಸರಾ ಉತ್ಸವದ ಬಗ್ಗೆ ಅಸಮಾಧಾನ ಹಾಗೂ ನಡೆಸಿಕೊಟ್ಟಿದ್ದರು. ದಶ ಮಂಟಪ ಸಮಿತಿ ಮಾರ್ಗದರ್ಶನದಲ್ಲಿ ಹತ್ತು ದೇವಾಲಯಗಳ ವತಿಯಿಂದ ಉತ್ಸವ ಮಂಟಪಗಳನ್ನು ಹೊರಡಿಸುವ ಮೂಲಕ ಶೋಭಾಯಾತ್ರೆಗೆ ಮೆರುಗು ನೀಡಲಾಗಿತ್ತು. ವಿಜೃಂಭಣೆಯ ದಸರಾ ಮುಗಿದು ಇದೀಗ ನಲವತ್ತು ದಿನಗಳು ಕಳೆದರೂ ಇನ್ನೂ ಕೂಡ ಉಪ ಸಮಿತಿಗಳ ಬಿಲ್ ಹಾಗೂ ದಶಮಂಟಪಗಳಿಗೆ ನೀಡಬೇಕಾದ ಅನುದಾನವನ್ನು ನೀಡಿಲ್ಲ. ದೊಡ್ಡ ಕಲಾವಿದರ ಎರಡು ಬಿಲ್‌ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳ ಖಾತೆಯಿಂದ ಬಿಡುಗಡೆಯಾಗಿರುವದು ಹೊರತು ಪಡಿಸಿದರೆ, ಇನ್ಯಾವದೇ ಹಣ ಪಾವತಿಗೆ ದಸರಾ ಸಮಿತಿ ಮುಂದಾಗ ದಿರುವದು ಮಡಿಕೇರಿ ದಸರಾ ಉತ್ಸವದ ಬಗ್ಗೆ ಅಸಮಾಧಾನ ಹಾಗೂ ನಿರಾಸಕ್ತಿ ಮೂಡಿಸಿದಂತಾಗಿದೆ..!

ಜನೋತ್ಸವ

ಮಡಿಕೇರಿ ದಸರಾವನ್ನು ಜನರ ಸಹಭಾಗಿತ್ವದೊಂದಿಗೆ ಜನೋತ್ಸವ ವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂಬAಧ ವಿವಿಧ ಉಪ ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಕಾರ್ಯ ಕ್ರಮಗಳ ಜವಾಬ್ದಾರಿ ವಹಿಸಲಾಗುತ್ತದೆ. ದಸರಾ ಉತ್ಸವಕ್ಕೆ ಈ ಬಾರಿ ಸರಕಾರ ದಿಂದ ರೂ. ೯೫ ಲಕ್ಷ ಅನುದಾನ ಕೂಡ ಬಿಡುಗಡೆಗೊಂಡಿದೆ. ಅಂತೆಯೇ ಎಲ್ಲ ಉಪ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿವೆ. ಈ ಪೈಕಿ ಸಾಂಸ್ಕೃತಿಕ ಸಮಿತಿಯವರದ್ದು ದೊಡ್ಡ ಜವಾಬ್ದಾರಿಯಾಗಿದೆ. ಒಂಬತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸ ಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಈ ಬಾರಿಯ ಸಮಿತಿ ಯಾವದೇ ಚ್ಯುತಿ ಬಾರದಂತೆ ನಿರ್ವಹಣೆ ಮಾಡಿದೆ. ನಾಡಿನ ಹೆಸರಾಂತ ಕಲಾವಿದರು ಸೇರಿದಂತೆ ಜಿಲ್ಲೆಯ ಕಲಾವಿದರು ಕಾರ್ಯಕ್ರಮ ನೀಡಿದ್ದರು. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಹಾಗೂ ಜಿಲ್ಲೆಯ ದೂರದ ಕಲಾವಿದರ ತಂಡಗಳಿಗೆ ಸಣ್ಣ ಪ್ರಮಾಣದ ಸಂಭಾವನೆ ನೀಡಲಾಗುತ್ತದೆ. ದಸರಾ ಕಳೆದು ಒಂದೆರಡು ವಾರದೊಳಗಡೆ ಈ ಹಣ ಪಾವತಿಯಾಗಬೇಕಿತ್ತು. ಆದರೆ, ದಸರಾ ಸಮಿತಿಯಿಂದ ಇನ್ನೂ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಲ್ ಸಲ್ಲಿಕೆಯಾಗ ದ್ದರಿಂದ ಇನ್ನಷ್ಟು ವಿಳಂಬವಾಗುತ್ತಿದೆ. ಇತ್ತ ಇನ್ನೂ ಕೂಡ ಸಂಭಾವನೆ ಬಾರದ್ದರಿಂದ ಕಲಾವಿದರು ಸಾಂಸ್ಕೃತಿಕ

(ಮೊದಲ ಪುಟದಿಂದ) ಸಮಿತಿಯವರಿಗೆ ಕರೆ ಮಾಡಿ ಸಂಭಾವನೆಗಾಗಿ ಒತ್ತಾಯಿಸುತ್ತಿದ್ದಾರೆ. ಉಪ ಸಮಿತಿಯವರು ದಸರಾ ಸಮಿತಿಯರ ಬೆನ್ನು ಹತ್ತುವಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತ ಸ್ವಂತ ಹಣ ಬಳಸಿ ಕ್ರೀಡೆ, ಕವಿಗೋಷ್ಠಿ, ಅಲಂಕಾರ ಸ್ಪರ್ಧೆ ನಡೆಸಿದ ಉಪ ಸಮಿತಿಯವರು ಕೂಡ ತಮ್ಮ ಬಿಲ್ ಪಾವತಿಗಾಗಿ ದಿನನಿತ್ಯ ದಸರಾ ಸಮಿತಿ ಕಚೇರಿಗೆ ಅಲೆದಾಡುವಂತಾಗಿದೆ.

ಸಮಿತಿಯ ಮೀನಾ ಮೇಷ..!

ದಸರಾ ಮುಗಿದ ಬಳಿಕ ಎಲ್ಲ ಉಪಸಮಿತಿಯವರು ಮಾಡಿದ ಖರ್ಚು ವೆಚ್ಚದ ಬಿಲ್‌ಗಳನ್ನು ದಸರಾ ಸಮಿತಿಗೆ ಸಲ್ಲಿಸಬೇಕಿದೆ. ದಸರಾ ಸಮತಿ ಪರಿಶೀಲನೆ ಮಾಡಿದ ಬಳಿಕ ಅಧ್ಯಕ್ಷರು ಹಾಗೂ ಆಯುಕ್ತರ ಸಹಿಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಬೇಕಿದೆ. ಅಲ್ಲಿಂದ ಅಂತಿಮಗೊAಡು ಜಿಲ್ಲಾಧಿಕಾರಿಗಳ ಮೂಲಕ ಕೆ೨ ವ್ಯವಸ್ಥೆಯಡಿ ಕಲಾವಿದರು ಹಾಗೂ ಆಯಾ ಉಪ ಸಮಿತಿಗಳು ನೀಡಿರುವ ಬಿಲ್‌ಗಳಲ್ಲಿ ಖಾತೆಗಳಿಗೆ ನೇರವಾಗಿ ಹಣ ಪಾವತಿಯಾಗುತ್ತದೆ. ಹಾಗಾಗಿ ಎಲ್ಲ ಸಮಿತಿಯವರು ಬಿಲ್‌ಗಳನ್ನು ದಸರಾ ಸಮಿತಿಗೆ ಸಲ್ಲಿಸಿದ್ದಾರೆ. ಆದರೆ, ಇಲ್ಲಿ ದಸರಾ ಸಮಿತಿಯಿಂದ ಯಾವದೇ ಕಡತಗಳು ಮುಂದಕ್ಕೆ ಹೋಗಿಲ್ಲ. ಸಮಿತಿಯವರು ಒಟ್ಟಾಗಿ ಪರಿಶೀಲನೆ ಮಾಡದೆ ಅಧ್ಯಕ್ಷರು ಒಮ್ಮೆ, ಕಾರ್ಯಾಧ್ಯಕ್ಷರು ಒಮ್ಮೆ, ಪ್ರಧಾನ ಕಾರ್ಯದರ್ಶಿ ಇನ್ನೊಮ್ಮೆ ಬಿಲ್ ಪರಿಶೀಲನೆ ಮಾಡಿ ಸಹಿ ಹಾಕುವ ಕಾರ್ಯ ಮಾಡುತ್ತಿರುವದರಿಂದ ಕಡತಗಳು ಇನ್ನೂ ಕೂಡ ನಗರಸಭೆಯಲ್ಲಿಯೇ ಉಳಿದುಕೊಂಡಿವೆ. ವಾಸ್ತವವಾಗಿ ಅಧ್ಯಕ್ಷರು ಹಾಗೂ ಆಯುಕ್ತರ ಸಹಿ ಪ್ರಮುಖವಾಗಿದ್ದು, ಉಳಿದಂತೆ ಪದಾಧಿಕಾರಿಗಳ ಒಪ್ಪಿಗೆ ಇರಬೇಕಿದೆ. ಆದರೆ, ಈಗಾಗಲೇ ಅಧ್ಯಕ್ಷರು ಕೆಲವು ಹಾಗೂ ಕಾರ್ಯಾಧ್ಯಕ್ಷರು ಕೆಲವು ಕಡತಗಳಿಗೆ ಸಹಿ ಹಾಕಿದ್ದು, ಇನ್ನೂ ಪ್ರಧಾನ ಕಾರ್ಯದರ್ಶಿ ಪರಿಶೀಲನೆ ಸಹಿ ಮಾಡಬೇಕಿದೆ ಎಂಬುದಾಗಿ ತಿಳಿದು ಬಂದಿದೆ. ಇವರುಗಳ ಸಹಿ, ಪರಿಶೀಲನೆಯ ಬಳಿಕ ಆಯುಕ್ತರು ಮತ್ತೊಮ್ಮೆ ಪರಿಶೀಲನೆ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅಲ್ಲಿ ಮತ್ತೆ ಪರಿಶೀಲನೆಯಾಗಿ ಕೆ೨ ವ್ಯವಸ್ಥೆಗೆ ಖಾತೆಗಳನ್ನು ಹೊಂದಾಣಿಕೆ ಮಾಡಿದ ಬಳಿಕವಷ್ಟೇ ಬಿಲ್ ಪಾವತಿಯಾಗುವದು. ಅದಕ್ಕೆ ಇನ್ನೆಷ್ಟು ಸಮಯ ಬೇಕಾಗಬಹುದೆಂಬದೇ ಪ್ರಶ್ನೆ..!

? ಕುಡೆಕಲ್ ಸಂತೋಷ್ ಕಲಾವಿದರಿಗೆ ಅವಮಾನ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭ ಆಗಿ ೫೦ ದಿನ ಕಳೆದರೂ ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಇದು ಬಹುತೇಕ ಕಲಾವಿದರ ಅಸಮಾಧಾನಕ್ಕೆ ಕಾರಣ ಆಗುತ್ತಿದೆ.

ನಗರ ದಸರಾ ಸಮಿತಿ ಮತ್ತು ನಗರಸಭೆ ದಸರಾ ಮುಗಿದ ಕೂಡಲೇ ದಸರಕ್ಕೂ ತನಗೂ ಸಂಬAಧ ಇಲ್ಲ ಎಂಬAತೆ ವರ್ತಿಸುತ್ತಿದ್ದಾರೆ. ಮುತುವರ್ಜಿ ತೋರಬೇಕಾದ ಅಧ್ಯಕ್ಷರು ನಿರ್ಲಕ್ಷö್ಯ ತಾಳಿದ್ದಾರೆ.

ಇದು ಕಲಾವಿದರಿಗೆ ಮಡಿಕೇರಿ ದಸರಾ ಸಮಿತಿ ಮಾಡುವ ಅವಮಾನವೇ ಸರಿ.

ದಸರಾ ಸಮಿತಿಯ ಈ ನಿರ್ಲಕ್ಷö್ಯದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನವನ್ನು ಅದೇ ಇಲಾಖೆ ನಿರ್ವಹಿಸುವುದು ಸೂಕ್ತ.

ದಸರಾ ಸಮಿತಿ ದಸರಾ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದು ಆರ್ಥಿಕ ನಿರ್ವಹಣೆಯನ್ನು ಜಿಲ್ಲಾಡಳಿತ ಮತ್ತು ಸಂಬAಧಿಸಿದ ಇಲಾಖೆ ನಿರ್ವಹಿಸುವುದು ಸೂಕ್ತ.

ಅದೇ ನಿಯಮಾನುಸಾರ ಸೂಕ್ತ ವ್ಯವಸ್ಥೆ ಕೂಡ ಹೌದು. ಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಶಾಸಕರು ಗಮನಹರಿಸಬೇಕು.

ದಸರಾ ಸಮಿತಿಯ ಇತರ ಪದಾಧಿಕಾರಿಗಳು ಕೂಡ ದಸರಾ ಮುಗಿದ ಕೂಡಲೇ ತಮಗೂ ದಸರಾಕ್ಕೂ ಸಂಬAಧ ಇಲ್ಲ ಎನ್ನುವಂತೆ ಬೆನ್ನು ತಿರುಗಿಸುವ ಬದಲು ಆಯಾ ವರ್ಷದ ದಸರಾ ಉತ್ಸವದ ವಹಿವಾಟಿನ ಬಗ್ಗೆ ವಿಳಂಬ ರಹಿತವಾಗಿ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಅದು ಆಗುತ್ತಿಲ್ಲ ಒಂದು ವರ್ಷದ ಬಳಿಕವೇ ದಸರಾ ಸಮಿತಿ ಸಭೆ ಸೇರಿ ಹಿಂದಿನ ವರ್ಷದ ದಸರಾ ಆಚರಣೆ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ.

ಕೇವಲ ೨ ದಿನದಲ್ಲಿ ಮಾಡಬಹುದಾದ ಕಾರ್ಯಕ್ಕೆ ದಸರಾ ಸಮಿತಿ ವಾರಗಟ್ಟಲೆ ಸಮಯ ತೆಗೆದುಕೊಳ್ಳುವುದು, ಇದರಿಂದ ವಿವಿಧ ಸಮಿತಿ ಪ್ರಮುಖರು ತಾವು ವೆಚ್ಚ ಮಾಡಿದ ಅನುದಾನ ಬಿಡುಗಡೆಗೆ ಗೋಗರೆಯಬೇಕಾದ ಪರಿಸ್ಥಿತಿ ಖಂಡಿತಾ ದಸರಾಕ್ಕೆ ಶೋಭೆ ತಾರದು.

ಸರಕಾರ ಬಿಡುಗಡೆ ಮಾಡಿದರೂ ದಸರಾ ಸಮಿತಿ ಅನುದಾನ ನೀಡಲು ಮೀನಾ ಮೇಷ ಎಣಿಸುತ್ತಿರುವುದು ಹಾಗೂ ಒಬ್ಬರ ಮೇಲೆ ಮತ್ತೊಬ್ಬರು ಜವಾಬ್ದಾರಿ ಹೊರಿಸಿ ತಾವು ನುಣಿಚಿಕೊಳ್ಳುತ್ತಿರುವುದು ವಿಪರ್ಯಾಸ.

- ಅನಿಲ್ ಎಚ್.ಟಿ.

ಅಧ್ಯಕ್ಷರು ದಸರಾ ಸಾಂಸ್ಕೃತಿಕ ಸಮಿತಿ