ಮಿಜೋರಾಂ: ಅಧಿಕಾರಕ್ಕೇರಿದ ಜೆಡ್‌ಪಿಎಂ

ಐಜ್ವಾಲ್, ಡಿ. ೪: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ ಗೊಂಡಿದ್ದು, ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) ೨೭ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ೪೦ ಸ್ಥಾನಗಳುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಧಿಸಿದೆ.

ಅಧಿಕಾರಾರೂಢ ಎಂಎನ್‌ಎಫ್ ಆಘಾತ ಅನುಭವಿಸಿದ್ದು, ೯ ಸ್ಥಾನ ಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ ೨ ಹಾಗೂ ಕಾಂಗ್ರೆಸ್ ೧ ಸ್ಥಾನದಲ್ಲಿ ವಿಜಯ ಸಾಧಿಸಿದೆ. ಬಿಜೆಪಿಯು ೨೦೧೮ರಲ್ಲಿ ೧ ಸ್ಥಾನದಲ್ಲಿ ಗೆದ್ದಿದ್ದು, ಈ ಬಾರಿ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಈ ಮಧ್ಯೆ, ಐಝಾಲ್ ಪೂರ್ವ-೧ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಎಂಎನ್‌ಎಫ್‌ನ ಜೋರಮತಂಗಾ ಅವರು ೨೧೦೦ ಮತಗಳಿಂದ ಪರಾಭವಗೊಂಡಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತು ವಾರಿಯಾಗಿ ಸೇವೆ ಸಲ್ಲಿಸಿದ ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮಾ ಅವರು ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPಒ)ನ ಮುಖ್ಯಮಂತ್ರಿ ಅಭ್ಯರ್ಥಿ ಯಾಗಿದ್ದು, ಭರ್ಜರಿ ಗೆಲುವಿನೊಂದಿಗೆ ಸಿಎಂ ಪಟ್ಟವೇರಲು ಸಜ್ಜಾಗಿದ್ದಾರೆ.

ಸವಾರನ ಮೇಲೆ ದರ್ಪ ತೋರಿದ ಭವಾನಿ ರೇವಣ್ಣ

ಮೈಸೂರು, ಡಿ. ೪: ಬೈಕ್‌ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಸವಾರನ ಮೇಲೆ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರು ದರ್ಪ ತೋರಿದ್ದು, ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ, ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ತುಸು ಹಾನಿಯಾಗಿದೆ. ಈ ವೇಳೆ ಕೆಂಡಾಮAಡಲಗೊAಡ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು, ಬೈಕ್ ಸವಾರನನ್ನು ತೀವ್ರವಾಗಿ ನಿಂದಿಸಿದ್ದಾರೆ. ವಿಡಿಯೋದಲ್ಲಿ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬಂದು ಬೈಕ್ ಸವಾರನ ಆರೋಗ್ಯ ವಿಚಾರಿಸಿಲ್ಲ. ಬದಲಿಗೆ ಹಿಗ್ಗಾಮುಗ್ಗಾ ಬೈದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಯೋಕೆ ೧.೫ ಕೋಟಿ ಕಾರೇ ಆಗಬೇಕಿತ್ತಾ, ಸುಟ್ಟು ಹಾಕ್ರೋ ಈ ಗಾಡಿನ ಎಂದು ಹೇಳಿರುವುದು ಕಂಡು ಬಂದಿದೆ. ಈ ನಡುವೆ ಘಟನೆಯ ೧೫ ನಿಮಿಷಗಳ ಸಂಪೂರ್ಣ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತದ ಬಳಿಕ ವಾಹನ ಸವಾರನ ಆರೋಗ್ಯ ವಿಚಾರಿಸದೇ ಕಾರಿನ ಬಗ್ಗೆ ಯೋಜಿಸಿದ ಭವಾನಿ ರೇವಣ್ಣ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳು ಸಾವು

ಹೈದರಾಬಾದ್, ಡಿ. ೪: ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೆಲಂಗಾಣದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ ಪೈಲಟ್‌ಗಳು ಸಾವಿಗೀಡಾಗಿದ್ದಾರೆ. ತೆಲಂಗಾಣದ ತೂಪ್ರಾನ್‌ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಿಗ್ಗೆ Piಟಚಿಣus ವಿಮಾನ ಪತನಗೊಂಡಿದೆ. ದುರಂತದ ವೇಳೆ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೈಲಟ್‌ಗಳಲ್ಲಿ ಒಬ್ಬ ಬೋಧಕ ಮತ್ತು ಒಬ್ಬ ಕೆಡೆಟ್ ಇದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ.

ತಮಿಳುನಾಡಿನಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ, ರೈಲು-ವಿಮಾನ ಸಂಚಾರ ಸ್ಥಗಿತ

ಚೆನ್ನೆöÊ, ಡಿ. ೪: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪು ಗೊಂಡಿರುವ ಪರಿಣಾಮ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಪರಿಣಾಮ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಮಿಚಾಂಗ್ ಚಂಡಮಾರುತ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಡಿಸೆಂಬರ್ ೫ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ರಾಜಧಾನಿ ಚೆನ್ನೆöÊ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರA ಜಿಲ್ಲಾಡಳಿತಗಳು ಸೋಮವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದ್ದವು. ಬೀಚ್‌ಗಳಿಗೆ ಜನರು ಭೇಟಿ ನೀಡಬಾರದು ಎಂದು ಗ್ರೇಟರ್ ಚೆನ್ನೈ ಪೊಲೀಸರು ಸೂಚಿಸಿದ್ದಾರೆ. ತಿರುವಲ್ಲೂರು ಮತ್ತು ಚೆನ್ನೈ ಜನರು ಡಿ.೪ ಮತ್ತು ೫ರಂದು ಮನೆಯ ಒಳಗೇ ಇರುವಂತೆ ಐಎಂಡಿ ತಿಳಿಸಿದೆ. ಡಿ.೩ರಿಂದ ೭ರವರೆಗೆ ಸುಮಾರು ೧೪೪ ರೈಲುಗಳ ಸೇವೆಯನ್ನು ರದ್ದಾಗಿವೆ. ಚೆನ್ನೈ ವಿಮಾನ ನಿಲ್ದಾಣದ ರನ್ ವೇ ಮೇಲೆ ಮಳೆನೀರು ನಿಂತ ಪರಿಣಾಮ ವಿಮಾನ ಸಂಚಾರ ಸ್ಥಗಿತವಾಗಿದೆ. ಸೋಮವಾರ ಬೆಳಿಗ್ಗೆ ಚೆನ್ನೆöÊನ ಪೂರ್ವ ಕರಾವಳಿ ರಸ್ತೆಯ ಕಾನತ್ತೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಪ್ರಕಾರ, ಮೃತರನ್ನು ಶೇಕ್ ಅಫ್ರಾಜ್ ಮತ್ತು ಎಂಡಿ ತೋಫಿಕ್ ಎಂದು ಗುರುತಿಸಲಾಗಿದೆ.