ಪೊನ್ನಂಪೇಟೆ, ಡಿ. ೪: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಪಿ.ಎ. ಹನೀಫ್ ಘೋಷಣೆ ಮಾಡಿದ್ದಾರೆ.

ಮಡಿಕೇರಿ ಬ್ಲಾಕ್‌ಗೆ ಕೆ.ಜೆ. ಪೀಟರ್, ವೀರಾಜಪೇಟೆ ಬ್ಲಾಕ್‌ಗೆ ಕೋಳುಮಂಡ ರಫೀಕ್, ಪೊನ್ನಂಪೇಟೆ ಬ್ಲಾಕ್‌ಗೆ ಎಂ.ಎ. ಶಮೀರ್, ಕುಶಾಲನಗರ ಬ್ಲಾಕ್‌ಗೆ ಕೆ.ಇ. ಅಬ್ದುಲ್ ರಜಾಕ್, ನಾಪೋಕ್ಲು ಬ್ಲಾಕ್‌ಗೆ ಎ.ಎಂ. ಉಮ್ಮರ್, ಸೋಮವಾರಪೇಟೆ ಬ್ಲಾಕ್‌ಗೆ ಅಕ್ಮಲ್ ಪಾಷ ಅವರನ್ನು ಬ್ಲಾಕ್ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಹನೀಫ್ ತಿಳಿಸಿದ್ದಾರೆ.