ಪೊನ್ನಂಪೇಟೆ, ಡಿ. ೫: ಅಖಿಲ ಕೊಡಗು ಅಮ್ಮ ಕೊಡವ ಸಮಾಜದ ವತಿಯಿಂದ ತಾ. ೧೦ ರಂದು ಬೆಳಿಗ್ಗೆ ೧೦.೩೦ಕ್ಕೆ ಗೋಣಿಕೊಪ್ಪ ಅಮ್ಮ ಕೊಡವ ಸಮಾಜದಲ್ಲಿ ಪುತ್ತರಿ ನಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕೊಡಗು ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹುಣಸೂರು ವಿಭಾಗದ ಡಿಎಫ್‌ಓ ಪುತ್ತಾಮನೆ ಸೀಮಾ ರಂಜನ್, ಬೆಂಗಳೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಡಾ. ಸರಸ್ವತಿ ಸೋಮೇಶ್, ವಕೀಲರು ಹಾಗೂ ಮೈಸೂರು ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚಮ್ಮಣಮಾಡ ಬಿ.ಗಿರೀಶ್ ಭಾಗವಹಿಸ ಲಿದ್ದಾರೆ. ಈ ಸಂದರ್ಭ ಪುರುಷರಿಗೆ ಮೊಟ್ಟೆ ಹಾಗೂ ಪ್ಲಾಸ್ಟಿಕ್ ಚೆಂಡಿಗೆ ಏರ್‌ಗನ್‌ನಿಂದ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಾಯ್ಸ್ ಆಫ್ ಅಮ್ಮ ಕೊಡವ ಆರ್ಕೆಸ್ಟ್ರಾ ತಂಡದವರು ಮಧ್ಯಾಹ್ನ ೨ ಗಂಟೆಯಿAದ ೩.೩೦ ರವರೆಗೆ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಥ್ಯು ಮಾಹಿತಿ ನೀಡಿದರು. ಈ ಸಂದರ್ಭ ಉಪಾಧ್ಯಕ್ಷ ಪಾಡಿಯಮಂಡ ಮುರುಳಿ, ಕಾರ್ಯದರ್ಶಿ ಪುತ್ತಾ ಮನೆ ಅನಿಲ್ ಪ್ರಸಾದ್, ಜಂಟಿ ಕಾರ್ಯದರ್ಶಿ ಅಮ್ಮತೀರ ಸುರೇಶ್, ಖಜಾಂಚಿ ಅಮ್ಮತೀರ ಗಣೇಶ್ ಹಾಗೂ ನಿರ್ದೇಶಕರಾದ ಅಮ್ಮತೀರ ರೇವತಿ ಪರಮೇಶ್, ನೆರೆಯಂಡಮ್ಮAಡ ಉಮಾ ಪ್ರಭು, ಬಾನಂಡ ಅಶೋಕ್, ನೆರೆಯಂಡಮ್ಮAಡ ಜನಾರ್ಧನ, ಪುತ್ತಾಮನೆ ವಿದ್ಯಾ ಜಗದೀಶ್ ಹಾಗೂ ಗುಂಭೀರ ವಿನಾಯಕ್ ಇದ್ದರು.