ಮಡಿಕೇರಿ, ಡಿ. ೪: ‘ಕೂರ್ಗ್ ವೆಲ್‌ನೆಸ್ ಫೌಂಡೇಷನ್’ ಹಾಗೂ ನಟ ಮಿಲಿಂಡ್ ಸೋಮನ್ ಅವರುಗಳ ಆಶ್ರಯದಲ್ಲಿ ೭ನೇ ಆವೃತ್ತಿಯ ಬರಿಗಾಲು ಮ್ಯಾರಥಾನ್ ತಾ. ೧೦ಕ್ಕೆ ನಡೆಯಲಿದೆ ಎಂದು ಫೌಂಡೇಷನ್‌ನ ಪ್ರಮುಖರಾದ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಅವರು ಮಾಹಿತಿ ನೀಡಿದ್ದಾರೆ.

ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಅಂದು ಬೆಳಿಗ್ಗೆ ೫:೩೦ಕ್ಕೆ ೪ ವಿಭಾಗಗಳಲ್ಲಿ ಮ್ಯಾರಥಾನ್ ಪ್ರಾರಂಭಗೊಳ್ಳಲಿದೆ. ೪೨ ಕಿ.ಮೀ ದೂರ ಓಟದ ಫುಲ್ ಮ್ಯಾರಥಾನ್ ಸ್ಪರ್ಧೆ (ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಕ್ರಮವಾಗಿ ರೂ.೧೩,೫೦೦, ರೂ.೯,೦೦೦ ಹಾಗೂ ರೂ.೪,೫೦೦ ನೀಡಲಾಗುವುದು), ೨೧ ಕಿ.ಮೀ ದೂರ ಓಟದ ಹಾಫ್ ಮ್ಯಾರಥಾನ್ (ರೂ.೭,೫೦೦(ಪ್ರ), ರೂ.೪,೦೦೦(ದ್ವಿ) ಹಾಗೂ ರೂ.೨,೦೦೦(ತೃ) ಬಹುಮಾನ ವಿಜೇತರಿಗೆ ನೀಡಲಾಗುವುದು), ೧೦ ಕಿ.ಮೀ ಓಟದ ಸ್ಪರ್ಧೆಯಲ್ಲಿ ಮೊದಲ ೩ ವಿಜೇತರಿಗೆ ರೂ.೩,೦೦೦, ರೂ.೨,೦೦೦ ಹಾಗೂ ರೂ.೧,೦೦೦ ನೀಡಲಾಗುವುದು. ೫ ಕಿ.ಮೀ ಓಟದಲ್ಲಿ ವಿಜೇತರಿಗೆ ರೂ.೨,೦೦೦, ರೂ.೧,೦೦೦ ಹಾಗೂ ರೂ.೫೦೦ ನೀಡಲಾಗುವುದು.

ಆಸಕ್ತ ಓಟಗಾರರು hಣಣಠಿs://ಥಿouಣooಛಿಚಿಟಿಡಿuಟಿ.ಛಿom/ಡಿಚಿಛಿes/ಣhe-bಚಿಡಿeಜಿooಣ-mಚಿಡಿಚಿಣhoಟಿ-೨೦೨೩/ ವೆಬ್‌ಸೈಟ್ ಮೂಲಕ ನೋಂದಣಿ ಮಾಡಬಹುದಾಗಿದೆ. ತಾ.೯ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯ ವರೆಗೆ ಹಾಗೂ ಸ್ಪರ್ಧೆ ನಡೆಯುವ ದಿನ ತಾ.೧೦ ರಂದು ಬೆಳಿಗ್ಗೆ ೫ ರಿಂದ ೬ ಗಂಟೆಯ ಒಳಗಾಗಿ ಸ್ಥಳದಲ್ಲಿಯೇ ನೋಂದಣಿ ಮಾಡುವ ಅವಕಾಶವನ್ನೂ ನೀಡಲಾಗಿದೆ.