ಕುಶಾಲನಗರ, ಡಿ. ೪: ಕುಶಾಲನಗರ ಗಣಪತಿ ರಥೋತ್ಸವ ಅಂಗವಾಗಿ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ಅಮ್ಯೂಸ್ ಮೆಂಟ್ ಪಾರ್ಕ್ನಲ್ಲಿ ಅಳವಡಿಸಿರುವ ಮರಣಬಾವಿ ಕೇಂದ್ರದಲ್ಲಿ ಎರಡು ವಾಹನಗಳು ತಾಂತ್ರಿಕ ವೈಫಲ್ಯದಿಂದ ಉರುಳಿ ಬಿದ್ದ ಘಟನೆ ನಡೆದಿದೆ.

ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸಾಹಸಿ ಪ್ರದರ್ಶನದಲ್ಲಿ ನಿರತರಾಗಿದ್ದ ಚಾಲಕರು ಭಾನುವಾರ ರಾತ್ರಿ ಪ್ರದರ್ಶನ ನೀಡುತ್ತಿದ್ದ ಸಂದರ್ಭ ಕಾರೊಂದು ತಾಂತ್ರಿಕ ವೈಫಲ್ಯದಿಂದ ಪ್ರದರ್ಶನ ನೀಡುತ್ತಿದ್ದ ಇನ್ನೊಂದು ಕಾರಿಗೆ ತಾಗಿ ಅವಘಡಕ್ಕೆ ಈಡಾಗಿದೆ.

ಈ ಸಂದರ್ಭ ಕಾರುಗಳು ಕೆಳಭಾಗಕ್ಕೆ ಉರುಳಿವೆ. ಚಾಲಕರಿಗೆ ಯಾವುದೇ ರೀತಿಯ ಗಾಯ ಉಂಟಾಗಿಲ್ಲ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.