ಕುಶಾಲನಗರ, ಡಿ.೪: ಕುಶಾಲನಗರ ಜಾತ್ರೆ ಮೈದಾನದಲ್ಲಿ ಜನಸಂದಣಿ ನಡುವೆ ಪೋಷಕರಿಂದ ಬೇರ್ಪಟ್ಟ ಪುಟ್ಟ ಬಾಲಕನನ್ನು ಪೋಷಕರಿಗೆ ಒಪ್ಪಿಸುವಲ್ಲಿ ಕರ್ತವ್ಯ ನಿರತ ಪೊಲೀಸರು ಯಶಸ್ವಿಯಾದ ಘಟನೆ ನಡೆದಿದೆ.
ಬೆಟ್ಟದಪುರ ಕಡೆಯಿಂದ ತನ್ನ ಪೋಷಕರೊಂದಿಗೆ ಜಾತ್ರೆಗೆ ಆಗಮಿಸಿದ ಅಂದಾಜು ೧೦ ವರ್ಷದ ಪವನ್ ಎಂಬ ಬಾಲಕ ಅಳುತ್ತಾ ತನ್ನ ಪೋಷಕರನ್ನು ಹುಡುಕಾಡುತ್ತಿರುವುದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ಜಾತ್ರಾ ಮೈದಾನದಲ್ಲಿದ್ದ ಪೊಲೀಸ್ ಔಟ್ ಪೋಸ್ಟಿಗೆ ತಂದು ಕೂರಿಸಿದ್ದಾರೆ.
ನಂತರ ಜಾತ್ರಾ ಮೈದಾನದಲ್ಲಿದ್ದ ಸಾಂಸ್ಕೃತಿಕ ವೇದಿಕೆಯ ಮೈಕ್ ಮೂಲಕ ಮಾಹಿತಿ ನೀಡಿದ ಮೇರೆಗೆ ಚಿಂತೆಗೀಡಾಗಿದ್ದ ಪೋಷಕರು ತಮ್ಮ ಪುತ್ರನನ್ನು ಪತ್ತೆ ಹಚ್ಚಲು ಸಹಕಾರಿಯಾಯಿತು. ಜಾತ್ರೆ ಮೈದಾನದಲ್ಲಿ ಪೊಲೀಸ್ ಇಲಾಖೆ ಪ್ರತಿ ದಿನ ಸಂಜೆ ೫ ಗಂಟೆಯಿAದ ೧೦ ಗಂಟೆ ತನಕ ಪೊಲೀಸ್ ಸೇವೆ ಕಲ್ಪಿಸುವ ಸಂಬAಧ ತಾತ್ಕಾಲಿಕ ಔಟ್ ಪೋಸ್ಟ್ ತೆರೆದಿದೆ.
ಕುಶಾಲನಗರ ಮತ್ತು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಂದ ಸುಮಾರು ಹತ್ತಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಜಾತ್ರಾ ಮೈದಾನದಲ್ಲಿ ನಿಯೋಜಿಸಲಾಗಿದ್ದು, ಇದರೊಂದಿಗೆ ಒಂದು ಡಿಎಆರ್ ವಾಹನವನ್ನು ಕೂಡ ಸ್ಥಳದಲ್ಲಿ ಇರಿಸಲಾಗಿದೆ. - ಸಿಂಚು