ಶನಿವಾರಸಂತೆ, ಡಿ. ೩: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ಶ್ರೀ ಮಾರಿಯಮ್ಮ ಮತ್ತು ಯಲ್ಲಮ್ಮ ದೇವಿಯ ಕಾರ್ತಿಕ ಮಾಸದ ವಾರ್ಷಿಕ ಪೂಜಾ ಮಹೋತ್ಸವ ತಾ.೫ ರಂದು ರಾತ್ರಿ ನಡೆಯಲಿದೆ. ಅಂದು ರಾತ್ರಿ ಮಹಾಪೂಜೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ.
ತಾ.೬ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಕೆಂಡೋತ್ಸವ, ೭ ಗಂಟೆಗೆ ಪದ್ಧತಿಯಂತೆ ಶ್ರೀ ಮಾರಿಯಮ್ಮ ದೇವಿಗೆ ಕೋಳಿ ಬಲಿ ಕೊಡುವ ಕಾರ್ಯ ನಡೆಯುತ್ತದೆ. ದೇವಿಗೆ ಎಡೆ ನೈವೇದ್ಯವಾದ ನಂತರ ಮಹಾ ಮಂಗಳಾರತಿಯಾಗಿ ಪ್ರಸಾದ ವಿನಿಯೋಗವಾಗುತ್ತದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಡಿ.ಆರ್.ವೇದಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.