ಕೂಡಿಗೆ, ಡಿ. ೪: ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಾಣವಾದ ಕೂಡಿಗೆಯ ಬ್ರಿಟಿಷರ ಕಾಲದ ಹಳೆಯ ಕಬ್ಬಿಣ ಸೇತುವೆಯನ್ನು ಸ್ವಚ್ಛಗೊಳಿಸುವಂತ ಕೆಲಸ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ನೇತೃತ್ವದಲ್ಲಿ ನಡೆಯಿತು.
ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಹಳೆ ಕಬ್ಬಿಣದ ಸೇತುವೆಯು ಹಲವು ವರ್ಷಗಳಿಂದ ಗಿಡಗಂಟಿಗಳು ಬೆಳೆದು ಸಾರ್ವಜನಿಕರು ಹಾಗೂ ವಾಹನ ಸವಾರರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಸ್ಥಳೀಯ ಗ್ರಾಮಸ್ಥರು ಕೂಡಿಗೆ ಹಾಗೂ ಕೂಡುಮಂಗಳೂರು ಎರಡು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರು ತಿರುಗಾಡಲು ಅನುಕೂಲಕರವಾಗುವ ದೃಷ್ಟಿಯಿಂದ ಪೌರ ಕಾರ್ಮಿಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಅವರು ಶನಿವಾರ ಬೆಳಿಗ್ಗೆನಿಂದಲೇ ಕೂಡಿಗೆಯ ಪುರಾತನ ಕಾಲದ ಹಳೆಯ ಕಬ್ಬಿಣ ಸೇತುವೆಯ ಎರಡು ಬದಿಗಳಲ್ಲೂ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ ಇತ್ತೀಚೆಗೆ ಹಾಸನ ಕುಶಾಲನಗರ ಮಾರ್ಗವಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಹೊಸ ಸೇತುವೆಯ ಮೇಲ್ಭಾಗ ವಾಹನಗಳು ಹಾಗೂ ಹಳೆಯ ಸೇತುವೆಯ ಮೇಲ್ಭಾಗ ಪಾದಚಾರಿಗಳು ತಿರುಗಾಡುತ್ತಿದ್ದಾರೆ. ಆದರೆ ಹಲವು ಸಮಯಗಳಿಂದಲೂ ಸೇತುವೆಯ ಎರಡು ಬದಿಗಳಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಇದರ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ಮೇರೆಗೆ ಪೌರಕಾರ್ಮಿಕರು ಹಾಗೂ ನಾವು ಒಟ್ಟು ಸೇರಿ ಹಳೆಯ ಪುರಾತನ ಕಾಲದ ಕಬ್ಬಿಣದ ಸೇತುವೆಯನ್ನು ಸ್ವಚ್ಛಗೊಳಿಸಿದ್ದಾಗಿ ಹೇಳಿದರು.