ವೀರಾಜಪೇಟೆ, ನ. ೩: ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಭೂ ಸೇನೆಯ (ಆರ್ಮಿ) ದಳ ಎನ್.ಸಿ.ಸಿ. ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಹೊಸ ಘಟಕವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಐಸಾಕ್ ರತ್ನಾಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಪ್ರೌಢಶಾಲೆಯಲ್ಲಿ ಎನ್.ಸಿ.ಸಿ. ವಾಯುದಳ ಘಟಕವು ಈಗಾಗಲೇ ಇದ್ದು, ಇದೀಗ ಆರ್ಮಿ ಘಟಕವನ್ನು ಆರಂಭಿಸಲಾಗಿದೆ. ಎನ್.ಸಿ.ಸಿ. ವಿದ್ಯಾರ್ಥಿಗಳು ಯಾವಾಗಲು ಸಮಾಜ ಮತ್ತು ರಾಷ್ಟçದ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಸ್ತು ಅದರ ದ್ಯೇಯವಾಕ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ೧೯ ಕೇರ್ ವಿದ್ಯಾರ್ಥಿಗಳು ಯಾವಾಗಲು ಸಮಾಜ ಮತ್ತು ರಾಷ್ಟçದ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಸ್ತು ಅದರ ದ್ಯೇಯವಾಕ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ೧೯ ಕೇರ್ ಬೆಟಾಲಿಯನ್‌ನ ಮಡಿಕೇರಿ ಘಟಕದ ಜೆಫ್ರಿ ಅರ್ಹಾನ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡುತ್ತಾ ಎನ್.ಸಿ.ಸಿ ಆರ್ಮಿ ಘಟಕದ ಸ್ಥಾಪನೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಎನ್.ಸಿ.ಸಿ ಅಧಿಕಾರಿಗಳಾದ ಅಬ್ದುಲ್ ಮುನೀರ್, ರಹಮತ್ ಉಪಸ್ಥಿತರಿ ದ್ದರು. ಈ ಸಂದರ್ಭ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.