ಮಡಿಕೇರಿ, ಡಿ. ೩: ಮಡಿಕೇರಿಯಲ್ಲಿ ಆಯೋಜಿತವಾಗಿದ್ದ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದ ಅಂಗವಾಗಿ ಇನ್ನರ್ ವೀಲ್ ಸಂಸ್ಥೆಗಳಿAದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆದವು. ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಶನಿವಾರ ರಾತ್ರಿ ಮಹಿಳೆಯರ ಸಾಂಸ್ಕೃತಿಕ ನೃತ್ಯಗಳ ವೈಭವ ಮೇಳೈಸಿತ್ತು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರಿಂದ ಗಣಪತಿ ಸ್ತುತಿ ಗೀತ ನೃತ್ಯ, ಜೀವನದಿ ಕಾವೇರಿ ನೃತ್ಯ, ಕೊಡವ ನೃತ್ಯ, ಬುಡಕಟ್ಟು ನೃತ್ಯಗಳು ಗಮನ ಸೆಳೆದವು. ಕುಶಾಲನಗರ ಇನ್ನರ್ ವೀಲ್ ಸದಸ್ಯೆಯರಿಂದ ರೀಲ್ಸ್ ಡಾನ್ಸ್, ಸೋಮವಾರಪೇಟೆ ಇನ್ನರ್ ವೀಲ್ ಸದಸ್ಯೆಯರಿಂದ ಸುಗ್ಗಿ ಕುಣಿತ, ಮಲೇಷಿಯಾ ತಂಡದಿAದ ಮಲೇಷಿಯನ್ ಜಿಗ್ ನೃತ್ಯ, ಮನ ಸೆಳೆದವು.

ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾ ಅಧ್ಯಕ್ಷರು ತಮ್ಮ ಆಡಳಿತ ವರ್ಷದ ಸಂದೇಶ ಸಾರುವ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಅಂತೆಯೇ ಇನ್ನರ್ ವೀಲ್ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ವೈವಿಧ್ಯಮಯ ಸಾಂಪ್ರದಾಯಿಕ ಸೀರೆಗಳ ಫ್ಯಾಷನ್ ಶೋದಲ್ಲಿ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರರಾದರು. ರಾಜ್ಯದ ೮ ಕಂದಾಯ ಜಿಲ್ಲೆಗಳಿಂದ ೬೦೦ ಕ್ಕೂ ಅಧಿಕ ಸದಸ್ಯೆಯರು ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.