ಪೊನ್ನಂಪೇಟೆ, ಡಿ. ೩: ಕರ್ನಾ ಟಕ ಸ್ಪೋರ್ಟ್ ಡ್ಯಾನ್ಸ್ ಅಸೋಸಿ ಯೇಷನ್, ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ ವಲಯ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೆ.ಎನ್. ದೀಕ್ಷಾ, ಶಾಸ್ತಿçÃಯ ನೃತ್ಯ (ವೈಯಕ್ತಿಕ), ಶಾಸ್ತಿçÃಯ ನೃತ್ಯ (ಗುಂಪು) ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಬಿಟ್ಟಂಗಾಲ ಗ್ರಾಮದ ಕೆ.ಎ. ನವೀನ್ ಕುಮಾರ್ ಮತ್ತು ಎ.ಎಸ್. ನಿತ್ಯ ದಂಪತಿಯ ಪುತ್ರಿ. ಈಕೆ ವೀರಾಜಪೇಟೆಯ ವಿದುಷಿ ಹೇಮಾವತಿ ಕಾಂತರಾಜ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ.