ಗುಡ್ಡೆಹೊಸುರು, ಡಿ. ೩: ಮುಸುಕುಧಾರಿ ಖದೀಮರು ಮನೆಯವರ ಮೇಲೆ ಮಂಕುಬೂದಿ ಎರಚಿ ಕಳ್ಳತನ ನಡೆಸಿರುವ ಘಟನೆ ಇಲ್ಲಿಗೆ ಸಮೀಪದ ರಸಲ್‌ಪುರ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮದರಸ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಪಿ.ಎಂ. ಇಸ್ಮಾಯಿಲ್ ಅವರ ಮನೆಗೆ ರಾತ್ರಿ ೨ ಗಂಟೆ ಸುಮಾರಿಗೆ ಬಂದ ಇಬ್ಬರು ಕಳ್ಳರು ಕಿಟಕಿ ಮೂಲಕ ಅವರನ್ನು ಕರೆದಿದ್ದಾರೆ. ಅವರು ಬಂದ ತಕ್ಷಣ ಕಳ್ಳರು ಬೂದಿಯನ್ನು ಮನೆಯವರ ಮೇಲೆ ಎರಚಿದ್ದು, ಎಲ್ಲರೂ ಪ್ರಜ್ಞಾಹೀನರಾಗಿದ್ದಾರೆ. ಮುಸುಕು ಧರಿಸಿದ್ದ ಕಳ್ಳರು ನಂತರ ಮನೆಯಲ್ಲಿದ್ದ ೪೫ ಗ್ರಾಂನಷ್ಟು ಚಿನ್ನ ಹಾಗೂ ರೂ. ೫ ಸಾವಿರ ನಗದನ್ನು (ಮೊದಲ ಪುಟದಿಂದ) ಕಳವು ಮಾಡಿ ಪರಾರಿಯಾಗಿದ್ದಾರೆ. ಪ್ರಜ್ಞೆ ಬಂದ ನಂತರ ಕಳ್ಳತನವಾಗಿರುವುದು ತಿಳಿದು ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಸ್ಮಾಯಿಲ್ ಮನೆಯಲ್ಲಿ ಕಳ್ಳತನ ನಡೆಸುವ ಮುನ್ನ ಕಳ್ಳರು ಮೂಲತಃ ಸುಳ್ಯದ ನಿವಾಸಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕÀ ಅಡ್ಕಾರು ಯಶ್ವಂತ್ ಅವರ ಮನೆಯಲ್ಲಿ ಕಳ್ಳತನ ನಡೆಸಲು ವಿಫಲ ಯತ್ನ ನಡೆಸಿದ್ದಾರೆ.

ಇಸ್ಮಾಯಿಲ್ ಮನೆಯಿಂದ ಕೆಲ ಅಂತರದಲ್ಲಿ ಯಶ್ವಂತ್ ಮನೆಗೆ ನುಗ್ಗಿದ ಕಳ್ಳರು ಕಿಟಕಿ ಮೂಲಕ ಅವರನ್ನು ಕರೆದಿದ್ದಾರೆ. ಆದರೆ, ಮನೆಯವರು ಅನುಮಾನಗೊಂಡು ಬಾಗಿಲು ತೆರೆಯಲಿಲ್ಲ. ನಂತರ ನೋಡಿದಾಗ ಮನೆಯ ಆವರಣದಲ್ಲಿ ನಿಲ್ಲಿಸಿದ ಕಾರಿನ ಮೇಲೆ ಬೂದಿ ಪತ್ತೆಯಾಗಿದೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಡಿ.ವೈ.ಎಸ್.ಪಿ. ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಠಾಣಾಧಿಕಾರಿಗಳಾದ ರಾಜೇಶ್, ಮೋಹನ್‌ರಾಜ್, ಅಪರಾಧ ವಿಭಾಗದ ಅಧಿಕಾರಿ ಭಾರತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬAಧಿಸಿದAತೆ ವಿಶೇಷ ತಂಡ ರಚಿಸಿ ಕಳ್ಳರ ಬಂಧÀನಕ್ಕೆ ಬಲೆ ಬೀಸಲಾಗಿದೆ. ಸ್ಥಳಕ್ಕೆ ಶ್ವಾನದಳ ತಂಡ ಪರಿಶೀಲನೆ ನಡೆಸಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಗಣೇಶ್ ಕುಡೆಕ್ಕಲ್