ಮುಳ್ಳೂರು, ಡಿ. ೨: ಇತ್ತೀಚಿಗೆ ತುಮಕೂರಿನಲ್ಲಿ ನಡೆದ ವಿದ್ಯಾರ್ಥಿಗಳ ಕರಾಟೆ ಮತ್ತು ಯೋಗ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಸಮೀಪದ ಆಲೂರು ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡರು. ಶಾಲೆಯ ಜನನಿ, ಲಿಖಿತ್, ವೈಷ್ಣವಿ, ದಿಷಿ ಕಾವೇರಮ್ಮ, ಜನಿತ್, ಮಾನವಿ, ರುಶಿತ ಮತ್ತು ತರುಣ್ ಅಬೈ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.