ವೀರಾಜಪೇಟೆ, ಡಿ. ೨: ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಅಂತರರಾಷ್ಟಿçÃಯ ಏಷ್ಯಾ ಪೆಸಿಫಿಕ್ ಕಾರ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ವೀರಾಜಪೇಟೆಯ ಸುಹೇಮ್ ಕಬೀರ್ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಥಮ ಪ್ರಯತ್ನದಲ್ಲಿಯೇ ಸಾಧನೆ ಮಾಡಿದ್ದಾರೆ. ನಾಲ್ಕು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ಸಮಗ್ರವಾಗಿ ೪ನೇ ಸ್ಥಾನ ಗಳಿಸುವುದರ ಮೂಲಕ ರಾಷ್ಟç ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಏಷ್ಯಾ ಪೆಸಿಫಿಕ್ ಕಾರ್ ರ‍್ಯಾಲಿ: ಏಷ್ಯಾ ಪೆಸಿಫಿಕ್ ಕಾರ್ ರ‍್ಯಾಲಿಯಲ್ಲಿ ಭಾರತ, ನ್ಯೂಜಿಲ್ಯಾಂಡ್, ಜಪಾನ್, ಥೈಲ್ಯಾಂಡ್, ಇಂಡೋನೇಷಿಯಾ ಸೇರಿದಂತೆ ವಿವಿಧ ದೇಶಗಳ ೬೩ ರ‍್ಯಾಲಿಪಟುಗಳು ಭಾಗವಹಿಸಿದ್ದರು. ಎನ್.ವಿ.ಎ ಕ್ಲಾಸ್ ಚಾಂಪಿಯನ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಫಾರಿನ್ ಕೆಟಗೆರಿಯ ಎಂ ೨ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು ಸಮಗ್ರವಾಗಿ ೪ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಸಹ ಚಾಲಕರಾಗಿ ಬೆಂಗಳೂರಿನ ಪಿ.ವಿ.ಎಸ್ ಮೂರ್ತಿ ಕಾರ್ಯ ನಿರ್ವಹಿಸಿದ್ದರು.

೪೦ ರಿಂದ ೫೦ ಲಕ್ಷ : ಭಾರತ ದೇಶದೊಳಗೆ ಒಂದು ರ‍್ಯಾಲಿ ಮಾಡಲು ೨ರಿಂದ ೩ ಲಕ್ಷ ಖರ್ಚಾಗುತ್ತದೆ. ಆದರೆ ಅಂತರರಾಷ್ಟಿçÃಯ ಮಟ್ಟದಲ್ಲಿ ರ‍್ಯಾಲಿ ಮಾಡಬೇಕಾದರೆ ೪೦ ರಿಂದ ೫೦ ಲಕ್ಷ ಬೇಕಾಗುತ್ತದೆ. ಭಾರತದ ಕಾರಿಗೆ ಹೋಲಿಸಿದರೆ ಅಂತರರಾಷ್ಟಿçÃಯ ಮಟ್ಟದ ಕಾರುಗಳು ಬಲಿಷ್ಠ ವಾಗಿರುತ್ತವೆ. ಭಾರತದ ಕಾರುಗಳ ಇಂಜಿನ್ ಸಾಮರ್ಥ್ಯ ೧೨೦ ರಿಂದ ೧೪೦ ಬಿ.ಹೆಚ್.ಪಿ ಆಗಿದ್ದರೆ ಅಲ್ಲಿನ ರೇಸ್ ಕಾರುಗಳು ೩೦೦ ಬಿ.ಎಚ್.ಪಿ ಆಗಿರುತ್ತದೆ.

(ಮೊದಲ ಪುಟದಿಂದ) ಸಮಗ್ರ ನಾಲ್ಕನೇ ಸ್ಥಾನ: ಅಂತರರಾಷ್ಟಿçÃಯ ನೆಲದಲ್ಲಿ ಯಾವುದೇ ತರಬೇತಿ ಇಲ್ಲದಿದ್ದರೂ ನಮ್ಮ ದೇಶದ ನೆಲದ ಸೊಗಡು ನನ್ನನ್ನು ಈ ಹಂತಕ್ಕೆ ತಲುಪಿಸಿತು. ಮೂರು ದಿನಗಳು ನಡೆದ ರ‍್ಯಾಲಿಯಲ್ಲಿ ಒಟ್ಟು ೧೨ ಹಂತಗಳಿತ್ತು. ಪ್ರಥಮ ಎರಡು ಹಂತಗಳಲ್ಲಿ ನೆಲವನ್ನು ಅರ್ಥ ಮಾಡಿಕೊಳ್ಳಬೇಕಾಯಿತು. ಪ್ರಥಮ ದಿನ ೧೭ ನೇ ಸ್ಥಾನ ಲಭಿಸಿತು. ಎರಡನೇ ದಿನ ೯ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮೂರನೇ ದಿನ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸಮಗ್ರ ಕೆಟಗೆರಿಯಲ್ಲಿ ೪ನೇ ಸ್ಥಾನ ಗಳಿಸಿದೆ ಎಂದು ಕಬೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಟೋಕ್ರಾಸ್: ಆಟೋಕ್ರಾಸ್ ಎಂದರೆ ಎರಡು-ಮೂರು ಕಿ.ಮೀ. ಸುತ್ತುಗಳಿಂದ ಕೂಡಿರುತ್ತದೆ (ಲ್ಯಾಪ್), ಅತಿ ವೇಗದಿಂದ ಚಾಲನೆ ಮಾಡಬೇಕು. ಬಾಲ್ಯದಿಂದಲೂ ಕಾರ್‌ಗಳ ಮೇಲೆ ಹೆಚ್ಚಿನ ವ್ಯಾವೋಹ ಹೊಂದಿದ್ದು, ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಕಾರ್ ರೇಸ್‌ಗಳನ್ನು ನೋಡಿ ಆಕರ್ಷಿತನಾದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ೨೦೦೯ರಲ್ಲಿ ಮನೆಯವರಿಗೆ ತಿಳಿಸದೆ ನಮ್ಮದೇ ಕಾರನ್ನು ತೆಗೆದುಕೊಂಡು ಹೋಗಿ ಬೇಗೂರಿನಲ್ಲಿ ನಡೆದ ಆಟೋಕ್ರಾಸ್ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ. ೫೬ ಕಾರುಗಳ ಪೈಕಿ ನನಗೆ ೬ನೇ ಸ್ಥಾನ ಲಭಿಸಿತು. ನಂತರದ ವರ್ಷ ಮೂರನೇ ಸ್ಥಾನ ಪಡೆದುಕೊಂಡೆ. ಆಟೋಕ್ರಾಸ್‌ನಲ್ಲಿ ಅತಿ ಹೆಚ್ಚು ವೇಗದಿಂದ ಚಾಲನೆ ಮಾಡಬೇಕಾದ ಕಾರಣ ಏಕಾಗ್ರತೆ ಹಾಗೂ ಚಾಕಚಕ್ಯತೆ ಬೇಕು. ಈವರೆಗೆ ೭೦ ಆಟೋಕ್ರಾಸ್ ೩೦ ರೋಡ್ರ‍್ಯಾಲಿ, ಇಂದು ಅಂತರರಾಷ್ಟಿçÃಯ ರ‍್ಯಾಲಿಯಲ್ಲಿ ಭಾಗವಹಿಸಿದ್ದೇನೆ ಎಂದು ಅವರು ತಮ್ಮ ಅನುಭವ ಹಂಚಿಕೊAಡಿದ್ದಾರೆ.

ರೋಡ್ ರ‍್ಯಾಲಿ: ೨೦೧೨ ರಲ್ಲಿ ಕ್ರಾಸ್ ಕಂಟ್ರಿ ರೋಡ್ ರ‍್ಯಾಲಿ ಮಾಡಲು ಪ್ರಾರಂಭಿಸಿದ ಕಬೀರ್, ದಕ್ಷಿಣ್ ಡೇರ್ ರ‍್ಯಾಲಿಯಲ್ಲಿ ಸಮಗ್ರ ಮೂರನೇ ಸ್ಥಾನ, ೨೦೧೩ರಲ್ಲಿ ಜೂನಿಯರ್ ಇಂಡಿಯಾ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

೨೦೨೪ರಲ್ಲಿ ಫೆಬ್ರವರಿಯಲ್ಲಿ ಚೆನೈನಲ್ಲಿ ಪ್ರಥಮ ಹಂತದ ಏಷ್ಯಾ ಪೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ ನಡೆಯಲಿದೆ. ಎರಡನೇ ಹಂತ ನ್ಯೂಜಿಲ್ಯಾಂಡ್, ಮೂರನೇ ಹಂತ ಜಪಾನ್, ನಾಲ್ಕನೇ ಹಂತ ಇಂಡೋನೇಷಿಯಾದಲ್ಲಿ ನಡೆಯಲಿದೆ. ಆ ರ‍್ಯಾಲಿಯಲ್ಲಿ ಭಾಗವಹಿಸಲು ಕಬೀರ್ ಸಿದ್ಧತೆ ನಡೆಸುತ್ತಿದ್ದಾರೆ.

ಇವರ ಸಹೋದರ ಸುಹಾನ್ ಕಬೀರ್ ಕೂಡ ಅಂತರರಾಷ್ಟಿçÃಯ ಕಾರ್ ರ‍್ಯಾಲಿ ಪಟುವಾಗಿದ್ದಾರೆ. ೨೦೧೮ರಲ್ಲಿ ಮೊದಲ ಬಾರಿ ರ‍್ಯಾಲಿ ಪದಾರ್ಪಣೆ ಮಾಡಿದ ಇವರು, ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ೧೦೦ಕ್ಕೂ ಅಧಿಕ ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ ಥೈಲಾಂಡ್‌ನಲ್ಲಿ ನಡೆದ ಅಂತರರಾಷ್ಟಿçÃಯ ಕಾರ್ ರ‍್ಯಾಲಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವೀರಾಜಪೇಟೆ ಪಂಜರುಪೇಟೆಯ ಡಿವೈನ್ ಮೋಟರ‍್ಸ್ ಮಾಲೀಕರಾದ ಕಬೀರ್ ಹಾಗೂ ಜುಹೇರಾ ಕಬೀರ್ ಅವರ ಪುತ್ರರಾಗಿದ್ದಾರೆ.

-ಪಳೆಯಂಡ ಪಾರ್ಥ ಚಿಣ್ಣಪ್ಪ