ಕರಿಕೆ, ನ. ೩೦: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಎಪ್ಪತ್ತನೆಯ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳ ದಿನಾಚರಣೆ ಕರಿಕೆ ಕೃಷಿ ಪತ್ತಿನ ಸಹಕಾರ ಸಭಾಂಗಣದಲ್ಲಿ ನಡೆಯಿತು.

ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧÀ್ಯಕ್ಷ ಬೇಕಲ್ ದೇವರಾಜ್ ಅಧÀ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧÀ್ಯಕ್ಷರಾದ ಅಪ್ಪಚ್ಚಟ್ಟೋಳಂಡ ಕೆ. ಮನು ಮುತ್ತಪ್ಪ ಉದ್ಘಾಟಿಸಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಏಳಿಗೆಗೆ ಶ್ರಮಿಸಿದ ಹಿರಿಯ ಸಹಕಾರಿಗಳಾದ ಬೇಕಲ್ ಜಯರಾಂ, ಹೊಸಮನೆ ಹರೀಶ್, ಕೋಡಿ ಸೀತಾರಾಮ, ಕಟ್ಟ್ಟೆಕೋಡಿ ರಾಘವ, ಎಸ್.ಕೆ. ವೆಂಕಪ್ಪ ಗೌಡ, ಬಿ.ಪಿ. ನಿರ್ಮಲಾನಂದ, ಬೇಕಲ್ ಜೆ. ಶರಣ್ ಕುಮಾರ್, ಬಿ.ಎ. ನಾರಾಯಣ, ಬೇಕಲ್ ದೇವರಾಜ್, ಪಾಂಡಿ. ನಂಜುAಡ, ಕಟ್ಟ ಕೋಡಿ ರಘುರಾಮ, ಪಿ.ಟಿ. ಐಸಾಕ್, ಕೋಡಿ ಪೊನ್ನಪ್ಪ ಹಾಗೂ ನಿವೃತ್ತಿ ಹೊಂದಲಿರುವ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಸಿ. ಗಂಗಾಧರ ಅವರನ್ನು ಸನ್ಮಾನಿಸಲಾಯಿತು.

ಕೇರಳದ ಖಾಸಗಿ ಆಯುರ್ವೇದ ಆಸ್ಪತ್ರೆಯ ವರಿಂದ ಸುಮಾರು ತೊಂಬತ್ತು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧಕ್ಷ ಎನ್. ಬಾಲಚಂದ್ರ ನಾಯರ್, ಹಾಪ್ ಕಾಮ್ಸ್ ನಿರ್ದೇಶಕ ಬಿ.ಎ. ರಮೇಶ್ ಚಂಗಪ್ಪ, ಯೂನಿಯನ್ ಬ್ಯಾಂಕ್ ನಿರ್ದೇಶಕ ಕೆ.ಎಸ್. ಗಣಪತಿ, ಕೆ.ಎಂ. ತಮ್ಮಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್ ಸೇರಿದಂತೆ ಇತರೆ ನಿರ್ದೇಶಕರು ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಹಕಾರ ಸಂಘಗಳ ಸಿಬ್ಬಂದಿ ವರ್ಗ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಜುಳ ಕಾರ್ಯಕ್ರಮ ನಿರೂಪಣೆ ಮಾಡಿ, ಕಾರ್ಯನಿರ್ವಾಹಕ ಅಧಿಕಾರಿ ಎನ್.ಸಿ. ಗಂಗಾಧರ ಸ್ವಾಗತಿಸಿ, ಬೇಕಲ್ ದೇವರಾಜ್ ವಂದಿಸಿದರು.