ವೀರಾಜಪೇಟೆ, ನ. ೩೦: ಮಹಿಳೆಯರು ಇತ್ತೀಚಿನ ದಿನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಘ-ಸAಸ್ಥೆಗಳ ಸಹಕಾರದಿಂದ ದೇಶದ ಪ್ರಗತಿಗೆ ಸ್ವ ಉದ್ಯೋಗದಲ್ಲಿಯೂ ಮುಂದುವರಿದು ಉತ್ತಮ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದು ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರ ಹೇಳಿದರು.
ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿಯಲ್ಲಿ ನೇಸರ ರೈತ ಉತ್ಪಾದಕರ ಸಮಿತಿ, ಹಾತೂರು ಕ್ಲಸ್ಟರ್ ಹಾಗೂ ಪೆರುಂಬಾಡಿ ನವಚೈತನ್ಯ ಉತ್ಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಅಕ್ಕಿ ಹಾಗೂ ಮಸಾಲೆ ಪದಾರ್ಥಗಳ ಮೌಲ್ಯವರ್ಧನ ಘಟಕವನ್ನು ಉದ್ಘಾಟಿಸಿದ ಅವರು, ಸಂಘಗಳ ಮೂಲಕ ನಡೆಸುವ ಸ್ವ ಉದ್ಯೋಗದಲ್ಲಿ ಜನರಿಗೆ ಉತ್ತಮವಾದ ಆರೋಗ್ಯ ಭರಿತ ವಸ್ತುಗಳನ್ನು ನೀಡುವುದರೊಂದಿಗೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಶ್ರಮಿಸಬೇಕೆಂದರು.
ಓಡಿಪಿ ಸಂಸ್ಥೆಯ ಎಫ್.ಪಿ.ಓ. ಕೊಡಗು ಸಂಯೋಜಕ ಜಾನ್ ರಾಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವೀರಾಜಪೇಟೆಯ ಹಾತೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಐದು ಗ್ರಾಮಗಳು ಸೇರಿದಂತೆ ನೇಸರ ರೈತ ಉತ್ಪಾದಕರ ಸಮಿತಿಯನ್ನು ಮಾಡಲಾಗಿದೆ. ಈಗಾಗಲೇ ೧೯೮೪ ರಿಂದ ಪ್ರಾರಂಭಗೊAಡು ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಸಣ್ಣ ರೈತರ ಏಳಿಗೆಗೆ ಅನುಕೂಲವಾಗಲಿದೆ ಎಂದರು.
ಸAಸ್ಥೆಯ ಮಂಡ್ಯ ಜಿಲ್ಲಾ ಸಂಯೋಜಕ ರಮೇಶ್ ಮಾತನಾಡಿ, ಸಂಘದ ಮೂಲಕ ಸ್ವ ಉದ್ಯೋಗ ನಡೆಸಲು ಸಂಸ್ಥೆ ಸಾಲದ ರೂಪದಲ್ಲಿ ಸಹಕಾರ ನೀಡಲಿದೆ ಎಂದರು. ಚಾಮರಾಜನಗರ ಜಿಲ್ಲಾ ಸಂಯೋಜಕ ಜಯರಾಮ್ ಮಾತನಾಡಿ, ರೈತರು ಶ್ರಮಪಟ್ಟು ಬೆಳೆದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ನಿಗದಿ ಮಾಡುವಂತಾಗಬೇಕು. ರೈತರ ಬೆಳೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನೇಸರ ರೈತ ಉತ್ಪಾದಕರ ಘಟಕದ ಹಾತೂರು ಕ್ಲಸ್ಟರ್ ಅಧ್ಯಕ್ಷರಾದ ಚಿಮ್ಮಣಮಾಡ ಧರಣೆ, ಓಡಿಪಿ ಜಿಲ್ಲಾ ವಲಯ ಸಂಯೋಜಕರಾದ ಜಾಯ್ಸ್ ಮೆನೆಜೇಸ್, ಪೊನ್ನಂಪೇಟೆ ವಲಯದ ಅನೀಶ್, ನವಚೈತನ್ಯ ಸಂಘದ ಅಧ್ಯಕ್ಷೆ ವಿಪಿನಾ, ಅನಿಲ್ ಕುಮರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಮಾನ್ಯು ವಹಿಸಿದ್ದರು. ಓಡಿಪಿ ಸಂಸ್ಥೆಯ ಕಾರ್ಯಕರ್ತರಾದ ರೀಟಾ ಜೋಸೆಫ್ ಸ್ವಾಗತಿಸಿದರು. ಬಿ.ಆರ್. ಸುಜಾತ ವರದಿ ಮಂಡಿಸಿದರು, ಅನಿಲ್ ಕುಮಾರ್ ನಿರೂಪಿಸಿದರೆ, ಇಂದಿರವತಿ ವಂದಿಸಿದರು.