ಚೀನಾಗೆ ‘ವೈರಾಣುಗಳ ದೇಶ’ ಎಂದೇ ಅನ್ವರ್ಥ ನಾಮ. ಅಲ್ಲಿಯ ಪ್ರಯೋಗಾಲಯಗಳಲ್ಲಿ ನಾನಾ ವೈರಾಣುಗಳ ಮೇಲೆ ಸಂಶೋಧನೆಗಳು ನಿತ್ಯ ನಿರಂತರವಾಗಿರುತ್ತವೆ. ೨೦೧೯ ರಲ್ಲಿ ಅಲ್ಲಿನ ವುಹಾನ್‌ನ ಪ್ರಯೋಗಾಲಯದಿಂದ ಸೋರಿಕೆಯಾದ ಸಾರ್ಸ್ ಕೋವಿಡ್ ವೈರಾಣು ಜಗತ್ತಿಗೆ ಮಾರಣಾಂತಿಕವಾಗಿ ಪರಿಣಮಿಸಿತು.

ವಿಶ್ವದಲ್ಲಿ ಇದುವರೆಗೆ ೬೯ ಲಕ್ಷ ೪೨ ಸಾವಿರ ಜನರು ಕೊರೊನಾಗೆ ಬಲಿಯಾಗಿದ್ದು, ಇಂದಿಗೂ ೨೨೯ ದೇಶಗಳ ೬ ಕೋಟಿ ೯೪ ಲಕ್ಷ ಕೊರೊನಾ ಸೋಂಕಿತರಾಗಿದ್ದಾರೆ. ಕೊರೊನಾ ಮಹಾಮಾರಿ ಆರಂಭವಾದAದಿನಿAದ ಇಂದಿನವರೆಗೂ ಅದರ ಭೀಕರತೆಯಿಂದ ಹೊರಬರಲಾರದ ಚೀನಾ, ಈಗ ಮತ್ತೊಂದು ಸಾಂಕ್ರಾಮಿಕದ ಭೀತಿ ಎದುರಿಸುತ್ತಿದೆ.

ನಿಗೂಢ ಮಾದರಿಯ ನ್ಯುಮೋನಿಯಾ ಪ್ರಕರಣ, ಮಕ್ಕಳಲ್ಲಿ ತೀವ್ರ ಉಸಿರಾಟದ ಸಮಸ್ಯೆ, ಏವಿಯನ್ ಇನ್‌ಫ್ಲುಯೆನ್ಸಾದಿಂದ ಬೀಜಿಂಗ್ ಮತ್ತು ಲಿಯಾನಿಂಗ್ ಸೇರಿದಂತೆ ಉತ್ತರ ಚೀನಾ ತತ್ತರಿಸಿದೆ. ಅಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಆಸ್ಪತ್ರೆಗಳು ಮಕ್ಕಳಿಂದ ಭರ್ತಿಯಾಗಿದೆ! ಆಸ್ಪತ್ರೆಗಳಲ್ಲಿ ಸ್ಥಳವಿಲ್ಲದೆ ಮಕ್ಕಳನ್ನು ವೆಂಟಿಲೇಟರ್, ವೆಯಿಟಿಂಗ್ ರೂಮ್‌ಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಗಳ ಕೊರತೆ, ವೈದ್ಯ ಸಿಬ್ಬಂದಿ ಕೊರತೆಯೂ ಭಾದಿಸುತ್ತಿದೆ ಎಂದು ವರದಿಯಾಗಿದೆ.

ಮೊದಲಿನಿಂದಲೂ ಚೀನಾ ಯಾವುದೇ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ನಿಖರ ಮಾಹಿತಿ ನೀಡದೆ, ದಾರಿ ತಪ್ಪಿಸುತ್ತಿದೆ. ಇದರಿಂದ ಸೋಂಕು ಉಲ್ಬಣಿಸಿದಾಗ, ಜಗತ್ತು ತತ್ತರಿಸುವಂತಾಗುತ್ತದೆ. ಈಗ ಅಲ್ಲಿ ಎದುರಾಗಿರುವ ತೀವ್ರ ಉಸಿರಾಟದ ಸಮಸ್ಯೆ, ಹೆಚ್೯ ಎನ್೨ ಸೋಂಕು, ಶ್ವಾಸಕೋಶ ಉರಿಯೂತ, ಅಧಿಕ ಜ್ವರ ಮತ್ತು ಅಮಾನ್ಯವಾದ ರೋಗ ಲಕ್ಷಣಗಳನ್ನು ಒಳಗೊಂಡಿದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಸುಮಾರು ೭ ಸಾವಿರ ಮಕ್ಕಳನ್ನು ಪೋಷಕರು ಒಂದೇ ದಿನ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹೆಚ್೯ ಎನ್೨ ಏವಿಯನ್ ಇನ್‌ಫ್ಲುಯೆನ್ಸಾ ವೈರಸ್‌ನಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಅಲ್ಲಿನ ಮಕ್ಕಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳ ಕೊರತೆ ಇದೆ ಎಂದು ವೈದ್ಯರು ಹೇಳಿದರೆ, ಮಕ್ಕಳಲ್ಲಿ ನ್ಯುಮೋನಿಯ ಹೆಚ್ಚಳಕ್ಕೆ ಉಸಿರಾಟದ ಸಿನ್ಸಿಟಲ್ ವೈರಸ್ ಕಾರಣ ಎಂದು ಚೀನಾದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಸೋಂಕು ಏರಿಕೆ ಮತ್ತು ಅದರ ಪರಿಣಾಮಗಳ ಕುರಿತು ಶೀಘ್ರವಾಗಿ ವರದಿ ಸಲ್ಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾವನ್ನು ಕೇಳಿದೆ. ಇದು ಸಾಮಾನ್ಯ ವಿಚಾರಣೆ ಎಂದು ಚೀನಾ ಪ್ರತಿಕ್ರಿಯಿಸಿದೆ. ನೆರೆಯ ರಾಷ್ಟçದಲ್ಲಿನ ಈ ಸೋಂಕುಗಳಿAದ ನಮ್ಮ ದೇಶದ ಮೇಲೆ ಹೆಚ್ಚಿನ ಪರಿಣಾಮವಾಗದು. ಚೀನಾದಲ್ಲಿನ ಬೆಳವಣಿಗೆಗಳನ್ನು ಸೂಕ್ಷö್ಮವಾಗಿ ಗಮನಿಸಲಾಗುತ್ತಿದೆ. ತುರ್ತು ಅನಾರೋಗ್ಯ ಕುರಿತು ಯಾವುದೇ ಸವಾಲು ಎದುರಿಸಲು ಅಗತ್ಯ ಪರಿಣತಿ ನಮ್ಮಲ್ಲಿದೆ ಎಂದು ನಮ್ಮ ಕೇಂದ್ರ ಸಚಿವಾಲಯ ಸ್ಪಷ್ಟಪಡಿಸಿದೆ.

ಹಕ್ಕಿ ಜ್ವರದ ಕಾರಣದಿಂದ ಕೋಳಿಗಳನ್ನು ಪ್ರತ್ಯೇಕಿಸುವ ಪ್ರವೃತ್ತಿ ೧೯೬೨ ರಲ್ಲಿ ಆರಂಭವಾಯಿತು. ಹಕ್ಕಿ ಜ್ವರದ ಹೆಚ್೯ ಎನ್೨ ವೈರಾಣು ೧೯೮೨ ರ ಸುಮಾರಿನಲ್ಲಿಯೇ ಪತ್ತೆಯಾಯಿತು. ಈ ಸೋಂಕು ಸಾಮಾನ್ಯವಾಗಿ ಕೋಳಿ, ಹಕ್ಕಿ, ಪ್ರಾಣಿ, ಸಸ್ತನಿಗಳಿಂದ ಹರಡುತ್ತದೆ. ಮನುಷ್ಯ ಸಂಪರ್ಕದಿAದ ಇದು ಹರಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತದೆ.

ಆದರೆ ಈಗ ಚೀನಾದಲ್ಲಿನ ಮಕ್ಕಳಲ್ಲಿ ಈ ಸೋಂಕು ಹರಡುತ್ತಿರುವ ವೇಗ ವಿವಿಧ ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್, ಸ್ಯಾನಿಟೈಸರ್ ಬಳಸುವ, ಜನನಿಬಿಡ ಪ್ರದೇಶಗಳಲ್ಲಿ ಜಾಗೃತೆ ವಹಿಸುವ ಎಚ್ಚರಿಕೆಯ ನಡೆ ನಮ್ಮದಾಗಲಿ. ಶೀತ, ಜ್ವರ, ಮೈಕೈ ನೋವು ಕಾಣಿಸಿದಾಗ ನಿರ್ಲಕ್ಷಿಸದೆ ತ್ವರಿತವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಲು ಆದ್ಯತೆ ನೀಡೋಣ. ಯಾವುದೇ ಆತಂಕಕ್ಕೆ ಒಳಗಾಗದೆ ಸಕಾಲದಲ್ಲಿ ಸೂಕ್ತ ನಡೆ ಅನುಸರಿಸೋಣ.

(ಸಂಗ್ರಹ)

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.